ಜಿಲ್ಲೆಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಿ

ಸಂಜೆವಾಣಿ ವಾರ್ತೆ

 ಹರಿಹರ ಆ 31; ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಒಳ್ಳೆಯ ಆರೋಗ್ಯ ನೀಡಬೇಕೆಂದು ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು.ದಾವಣಗೆರೆ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಅಧಿಕಾರಿ ಡಾ. ಎಸ್ ಷಣ್ಮುಖಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು. ಜಿಲ್ಲೆಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಕೊಡುವ ಕೆಲಸದಲ್ಲಿ ಮುಂದಾಗಿದ್ದಾರೆ ಮನುಷ್ಯನಿಗೆ ಎಷ್ಟೇ ದುಡ್ಡು ಇದ್ದರೂ ಆರೋಗ್ಯ ಭಾಗ್ಯ ಮಾತ್ರ ಸದೃಢವಾಗಿರಬೇಕು  ಈ ನಿಟ್ಟಿನಲ್ಲಿ ಜಿಲ್ಲೆಯ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಜನಸ್ನೇಹಿ ವೈದ್ಯಕೀಯ ಸೇವೆಗೆ ಆದ್ಯತೆ ನೀಡಬೇಕು ಕೋವಿಡ್ 19 ರೋಗ  ನಿಯಂತ್ರಣ ಸಂದರ್ಭದಲ್ಲಿ ವೈದ್ಯ ಹರೀ  ನಾರಾಯಣ ಎಂದು ವೈದ್ಯರನ್ನು ದೇವರಿಗೆ ಸಮಾನಾಗಿ ಕಾಣುವ  ನಮ್ಮ ನಾಡಲ್ಲಿ   ವೈದ್ಯರಿಗೆ ವಿಶೇಷ ಸ್ಥಾನಮಾನ ಇದೆ ನಾವು ಕೂಡ ಅತ್ಯಂತ ಗೌರವದಿಂದ ವೈದ್ಯರು ಸಿಬ್ಬಂದಿಗಳನ್ನು ಕಾಣುತ್ತೇವೆ ಎಂದರುಹರಿಹರ ತಾಲೂಕು ಆಸ್ಪತ್ರೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತಂದರೆ ಆರೋಗ್ಯ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಕಾರ್ಯವನ್ನು ಮಾಡುತ್ತೇನೆ ಜಿಲ್ಲೆ ತಾಲೂಕು ಆಸ್ಪತ್ರೆಗಳಿಗೆ  ಬೇಟೆ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಕ್ಕೆ ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಷಣ್ಮುಖಪ್ಪ ಇವರಿಗೆ ಮನವಿ ಮಾಡಿದರು.ಗ್ರಾಮೀಣ ಪ್ರದೇಶದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ಅಭೀದಲಿ. ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಇದ್ದರು.