ಬೀದರ, ಜೂ.22:ಕೇರಳದ ಗ್ರಂಥಾಲಯ ಹಾಗೂ ಸಾಕ್ಷರತಾ ಚಳುವಳಿಯ ಪಿತಾಮಹರೆಂದೆ ಖ್ಯಾತರಾದ ಪಿ.ಎನ್.ಪನಿಕರ್ ಇವರ ಸವಿ ನೆನಪಿಗಾಗಿ ಜೂನ್ 19 ರಿಂದ ಜುಲೈ18ರ ವರೆಗೆ ದೇಶದಾದ್ಯಂತ ಓದುವ ದಿನ, ಓದುವ ತಿಂಗಳನ್ನಾಗಿ ಆಚರಿಸಲಾಗುತ್ತಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಹೇಳಿದರು.
ಅವರು ಬುಧವಾರ ಬೀದರ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಎಸ್.ಪಿ. ಕಛೇರಿ ಶಾಖಾ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿ ಓದುವ, ಡಿಜಿಟಲ್ ಓದುವ ದಿನ, ಓದುವ ತಿಂಗಳಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮ ಆಯೋಜನೆಯ ಮುಖ್ಯ ಉದ್ದೇಶ ಸಾರ್ವಜನಿಕರನ್ನು ಗ್ರಂಥಾಲಯದೆಡೆಗೆ ಆಕರ್ಷಿಸಿ ಓದುವ ಸಂಸ್ಕøತಿಯನ್ನು ಬೆಳೆಸುವುದಾಗಿದೆ. ಈ ಕಾರ್ಯಕ್ರಮವು ನಿರಂತರವಾಗಿ ಒಂದು ತಿಂಗಳ ಕಾಲ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಓದುವ ಸ್ಪರ್ಧೆ, ಪ್ರಬಂಧ ಬರೆಯುವ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿಶೇಷವಾಗಿ ಮಕ್ಕಳನ್ನು ಗ್ರಂಥಾಲಯದೆಡೆಗೆ ಆಕರ್ಷಿಸಲು ಪ್ರಯತ್ನಿಸಲಾಗುವುದು. ಜೊತೆಗೆ ಪುಸ್ತಕ ಜೋಳಿಗೆ ಎಂಬ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕರಿಂದ ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಪಡೆಂiÀiಲಾಗುವುದೆಂದು ತಿಳಿಸಿದರು.
ಕರ್ನಾಟಕ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯವು ಕೇವಲ 3 ವರ್ಷಗಳ ಅವಧಿಯಲ್ಲಿ 3 ಕೋಟಿ 50 ಲಕ್ಷ ಸದಸ್ಯರನ್ನು ನೊಂದಾಯಿಸುವ ಮೂಲಕ ಇಡೀ ವಿಶ್ವದಲ್ಲಿಯೇ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೊಂದಣಿಯಲ್ಲಿ ಮುಂಚೂಣಿಯಲ್ಲಿದೆ ಎಂದ ಅವರು ಬೀದರ ಜಿಲ್ಲೆಯಲ್ಲಿ ಈಗಾಗಲೇ 08 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸಲು ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕÀ ಅಜಯಕುಮಾರ, ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಶರಣಬಸಪ್ಪ, ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ಧಾರ್ಥ ಎ. ಭಾವಿಕಟ್ಟೆ, ಬೀದರ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸವಿತಾ ಎನ್. ಎಮ್., ಶಾಖಾ ಗ್ರಂಥಾಲಯದ ಪ್ರಭಾರಧಾರಕರಾದ ಹನುಮಂತಪ್ಪ ವಲ್ಲೆಪುರೆ, ಗ್ರಂಥಾಲಯ ಇಲಾಖೆ ಸಿಬ್ಬಂದಿಗಳಾದ ದೇವಿದಾಸ, ಶ್ರೀ ಅಬ್ದುಲ್ ರಶೀದ್, ಶ್ರೀ ದೀಪಕ್ ಕಮತರ, ರಘು, ಮಹಾದೇವಪ್ಪ, ವೀರಣ್ಣ, ದಿಲೀಪಕುಮಾರ, ಭವಾನಿ, ಸುಭಾಷ, ಮಲ್ಲಿಕಾರ್ಜುನ, ಕೃಷ್ಣಕುಮಾರ , ರಾಜಪ್ಪ, ಸಾಹಿತಿಗಳಾದ ದೇವೇಂದ್ರಪ್ಪ ವಲ್ಲೇಪುರೆ, ಚೆನ್ನಮ್ಮ ವಲ್ಲೆಪುರೆ ಹಾಗೂ ಗ್ರಂಥಾಲಯದ ಓದುಗರು ಉಪಸ್ಥಿತರಿದ್ದರು.