ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆಕ್ಸಿಜೆನ್ ಕಾನ್ಸೆಂಟ್ರೇಟರ್ಸ್ ನೀಡಿಕೆ

ಕೆ.ಆರ್.ಪೇಟೆ. ಮೇ.30: ಇಡೀ ದೇಶವೇ ಆಕ್ಸಿಜೆನ್ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ನೋಡಿ ಸಾರ್ವಜನಿಕರ ಜೀವಗಳಿಗೆ ಬೆಲೆಕಟ್ಟಲಾಗದು ಎಂಬುದನ್ನು ಅರಿತು ಏಷಿಯನ್ ಪೇಯಿಂಟ್ಸ್ ವ್ಯವಸ್ತಾಪಕ ನಿರ್ದೇಶಕರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಆಕ್ಸಿಜೆನ್ ಕಾನ್ಸೆಂಟ್ರೇಟರ್ಸ್‍ಗಳನ್ನು ನೀಡಿರುವುದು ಅವರ ಉದಾರತೆಯನ್ನು ತೋರಿಸುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಂತ್ ತಿಳಿಸಿದರು.
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ಕು ಆಕ್ಸಿಜೆನ್ ಕಾನ್ಸೆಂಟ್ರೇಟರ್ಸ್‍ಗಳನ್ನು ಸ್ವೀಕರಿಸಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಕೊರೋನಾ ಎರಡನೇ ಅಲೆಯ ತೀವ್ರತೆಗೆ ಸಾವಿನ ಪ್ರಮಾಣ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದ್ದು ಸೋಂಕಿತರು ದಾಖಲಾದ 2-3 ದಿನಗಳಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ನಾನಾ ಕಾರಣಗಳಿದ್ದರೂ ಪ್ರಾಣವಾಯುವಾಗಿರುವ ಆಕ್ಸಿಜೆನ್ ಸಕಾಲದಲ್ಲಿ ಪೂರೈಸುವಿಕೆಯು ಮುಖ್ಯವಾಗಿದೆ. ಇದನ್ನು ತಿಳಿದು ಏಷಿಯನ್ ಪೇಯಿಂಟ್ಸ್ ಮಾಲೀಕರು ಸಾರ್ವಜನಿಕರ ಪ್ರಣಗಳನ್ನು ಉಳಿಸಲು ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಆಕ್ಸಿಜೆನ್ ಕಾನ್ಸೆಂಟ್ರೇಟರ್ಸ್‍ಗಳನ್ನು ಉಚಿತವಾಗಿ ನೀಡುತ್ತಿರುವುದು ಇಂಥಹ ಸಂಧಿಗ್ದ ಸಮಯದಲ್ಲಿ ಬಹಳ ಅನುಕೂಲಕರವಾಗಲಿದೆ ಅವರ ಈ ಸೇವೆಗೆ ತುಂಬು ಹೃದಯದ ಅಭಿನಂದನೆಗಳು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಫಾರ್ಮಸಿ ಅಧಿಕಾರಿ ಬಿ.ಎಸ್.ಸತೀಶ್ ಬಾಬು, ಹಿರಿಯ ಶುಶ್ರೂಷಕಿ ಬೇಬಿ ಸೇರಿದಂತೆ ಹಲವರು ಹಾಜರಿದ್ದರು.