(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.04: ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆಂದು ಯುವಜನ ಸೇವೆ ಮತ್ತು ಕ್ರೀಡಾ ಹಾಗು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದರು.
ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಸರ್ಕಾರ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಟಾವಂತನಾಗಿ ಪ್ರಾಮಾಣಿಕವಾಗಿ ನಿರ್ವಹಿಸಲಿದೆ. ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಾದ್ಯಂತ ಸಂಚರಿಸಿ ಅಭಿವೃದ್ಧಿಗೆ ಶ್ರಮಿಸಲಿದೆ.
ನನ್ನ ಇಲಾಖೆಯಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಸರಿಪಡಿಸಲಿದೆ.
ಈ ಇಲಾಖೆಯಡಿ ಬರುವ ಪರಿಶಿಷ್ಟ ಪಂಗಡದ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಿದೆ. ಅವರಿಗೆ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ದೊರೆಯುವಂತೆ ಮಾಡಿ ಕಾಡಿನಲ್ಲಿರುವ ಕುಟುಂಬಗಳ ಯೋಗ ಕ್ಷೇಮ ಮುಖ್ಯ ಎಂದರು.
ಇನ್ನು ಯುವಕನಾದ ನನಗೆ ಕ್ರೀಡೆ ಯುವಜನ ಸೇವೆ ಕಲ್ಪಿಸಿದ್ದಾರೆ. ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲು ಅನುಕೂಲವಾಗಲು ಸ್ಟೇಡಿಯಂ ನಿರ್ಮಿಸುವ ಸಂಕಲ್ಪ ಇದೆ. ಒಟ್ಟಾರೆ ಒಂದು ಸುಸಜ್ಜಿತ ಸ್ಟೇಡಿಯಂ ಮಾಡಲಿದೆ.
ನಮ್ಮ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಮಾತುಕತೆ ನಡೆಸಿ. ಕ್ರೀಡೆಗೆ ಅವಶ್ಯವಾದ ವ್ಯವಸ್ಥೆ ಮಾಡಲು ಪ್ರಯತ್ನ ನಡೆಯಲಿದೆಂದರು.
ಜಿಲ್ಲೆಯ ಉಸ್ತುವಾರಿ ಕೊಡುವ ವಿಚಾರ ಸಿಎಂ ಅವರಿಗೆ ಬಿಟ್ಟಿದ್ದು. ಜಿಲ್ಲೆಯ ಆಯಾ ಕ್ಷೇತ್ರಗಳ ಶಾಸಕರಿಂದ ಅಭಿವೃದ್ಧಿಗೆ ಶ್ರಮಿಸಲಿದೆಂದರು.
ಗ್ಯಾರೆಂಟಿ ಯೋಜನೆಗಳು ಗ್ಯಾರೆಂಟಿ:
ಪ್ರತಿಪಕ್ಷಗಳ ಬೊಬ್ಬೆಯಿಂದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನತೆಗೆ ಅನುಮಾನ ಇತ್ತು. ಆದರೆ ಅದಕ್ಕೆ ಈಗ ಅವಕಾಶ ಕೊಡದೆ ಐದು ಗ್ಯಾರೆಂಟಿ ನೀಡಿದೆಂದರು.
ಇಲಾಖೆಗಳಿಗೆ ನೀಡುವ ಅನುದಾನವನ್ನು ಕಡಿತ ಮಾಡಲ್ಲ ಎಂದು ಸಿಎಂ ಹೇಳಿದ್ದಾರೆಂದರು.