ಜಿಲ್ಲೆಯ ಅಭಿವೃದ್ಧಿಗೆ ಮತ್ತೊಮ್ಮೆ ಆರ್ಶೀವದಿಸಿ – ಸಂಸದ

ರಾಯಚೂರು,ಏ.೧೬ –
ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಗ್ಯಾರೆಂಟಿ ಮಹಿಮೆಯಲ್ಲಿ ಚುನಾವಣೆಯನ್ನು ಗೆದ್ದಿದ್ದು ಅವುಗಳು ತಾತ್ಕಾಲಿಕ ಗ್ಯಾರೆಂಟಿಗಳಾಗಿದ್ದು ಇದರಿಂದ ರಾಜ್ಯದ ಜನತೆ ಇದು ಆರ್ಥಿಕವಾಗಿ ತೊಂದರೆಗೆ ಒಳಗಾಗುತ್ತಿರುವುದನ್ನು ಕಾಣುತ್ತೇವೆ , ಇದರಿಂದಾಗಿ ಈ ಬಾರಿ ಮೋದಿಜಿಯವರ ಗ್ಯಾರೆಂಟಿಗಳಾದ ಬಡವರು, ರೈತರು,ಕಾರ್ಮಿಕರು, ಯುವಜನತೆ, ಮಹಿಳೆಯರ ಸಬಲೀಕರಣ ಗ್ಯಾರೆಂಟಿಗೆ ಅತಿಹೆಚ್ಚಿನ ಆದ್ಯತೆ ನೀಡಿಬೇಕೆಂದರು.
ಅವರಿಂದು ಕೆಂಭಾವಿಯ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕೆಂಭಾವಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿಂದು ಮಾತನಾಡಿದವರು.
ನಾನು ಕಳೆದ ಐದು ವರ್ಷದಲ್ಲಿ ಯಾದಗಿರಿ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವೆ , ಯಾದಗಿರಿಯಲ್ಲಿ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮೆಡಿಕಲ್ ಕಾಲೇಜು ಕಾಲೇಜು, ಇಎಸ್‌ಐ ಆಸ್ಪತ್ರೆ, ಅಂಚೆ ಕಛೇರಿ ಪ್ರಾದೇಶಿಕ ಕೇಂದ್ರಗಳನ್ನು ಜಾರಿಗೆ ತಂದಿರುವೆ, ಭಾರತ ಮಾಲಾ ಯೋಜನೆಯಡಿ ರಾಷ್ಟೀಯ ಹೆದ್ದಾರಿಗಳನ್ನು ತಂದಿದ್ದು, ಅಲ್ಲದೇ ಯಾದಗಿರಿ – ರಾಯಚೂರು ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಸೇರಿಸಲಾಗಿದೆ, ಮುಂದಿನ ದಿನಗಳಲ್ಲಿ ಶಹಾಪೂರ, ಸುರುಪುರ, ಲಿಂಗಸೂಗೂರು ಭಾಗದಲ್ಲಿ ರೈಲು ಯೋಜನೆ ಪ್ರಗತಿಯಲ್ಲಿದ್ದು ೩ ವರ್ಷದಲ್ಲಿ ಗತಿಶಕ್ತಿ ಯೋಜನೆಯಡಿ ರೈಲು ಓಡಾಡಲಿದೆ, ನಾನು ಹಿಂದೆ ಕೂಡ ಸಚಿವನಾಗಿ ಶಾಸಕನಾಗಿ ಕೆಲಸ ಮಾಡಿ ಈ ಭಾಗದ ನೀರಾವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ.ಈ ಹಿಂದೆ ಲೋಕಸಭಾ ಕ್ಷೇತ್ರದ ಗೆದ್ದವರು ಯಾದಗಿರಿ ಜಿಲ್ಲೆಗೆ ಬರತಾ ಇರಲಿಲ್ಲ ಆದರೆ ನಾನು ಅತಿಹೆಚ್ಚಿನ ಅನುದಾನ
ತರುವ ಮೂಲಕ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಟಲ್ ಜಿ ಯೋಜನೆಯಡಿ ಉಭಯ ಜಿಲ್ಲೆಯ ತಾಂಡಗಳಿಗೆ ೨೫೦೦ ಸೋಲಾರ ಲೈಟ್ ಗಳನ್ನು ಹಾಕುವ ಮೂಲಕ ಗ್ರಾಮಗಳಿಗೆ ನಿರಂತರ ವಿದ್ಯುತ್ ಇರುವಂತೆ ಮಾಡಲಾಗಿದೆ. ಈಗಾಗಿ ಪ್ರಗತಿಯಲ್ಲಿರುವ ಯೋಜನೆಗಳ ಸಂಪೂರ್ಣಕ್ಕಾಗಿ ಮತ್ತೊಮ್ಮೆ ಆರ್ಶೀವದಿಸಬೇಕೆಂದರು.
ಈ ವೇಳೆ ಮಾತನಾಡಿದ ಯಾದಗಿರಿ ಜಿಲ್ಲಾಧ್ಯಕ್ಷರಾದ ಅಮೀನರೆಡ್ಡಿ ಯಾಳಗಿರವರು ಮಾತನಾಡಿ
ಹತ್ತನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಈಗ ಮೂರನೇ ಸ್ಥಾನಕ್ಕೇರಿದೆ. ಶ್ರೀ ನರೇಂದ್ರ ಮೋದಿಜೀವರ ಮಾತಿಗೆ ವಿಶ್ವದಾದ್ಯಂತ ಪಾಶಸ್ತ್ಯ ಹಾಗೂ ಗೌರವ ಸಿಗುತ್ತಿದೆ, ಹತ್ತು ವರ್ಷಗಳ ಹಿಂದೆ ಹಿಂಜರಿಕೆ ಕೀಳರಿಮೆಯಿಂದ ಬಳಲುತ್ತಿದ್ದ ಭಾರತ ಇಂದು ಮೋದಿಜಿಯವರ ನಾಯಕತ್ವದಲ್ಲಿ ಜಾಗತಿಕ ಸಮುದಾಯದ ಮಧ್ಯೆ ಎದೆಯುಬ್ಬಿಸಿ ಮುನ್ನುಗ್ಗುತ್ತಿದೆ ಈಗಾಗಿ ದೇಶದ ರಕ್ಷೆಣೆಗೆ, ಭವಿಷ್ಯಕ್ಕಾಗಿ ಬಿಜೆಪಿಯನ್ನು ಬೆಂಬಲಿಬೇಕಿದೆ ಅಲ್ಲದೇ ಕೇಂದ್ರ ಸರ್ಕಾರದ ಸಾಧನೆಳನ್ನು ನಮ್ಮೆಲ್ಲ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಸಜ್ಜನ ಸೌಮ್ಯ ಸ್ವಭಾವದ ಹಿರಿಯರಾದ ರಾಜಾ ಅಮರೇಶ್ವರ ನಾಯಕರು ಕಳೆದ ಐದು ವರ್ಷದಲ್ಲಿ ೩೪ ಸಾವಿರ ಕೋಟಿಗಳ ಅನುದಾನವನ್ನು ತರುವ ಮೂಲಕ ಉಭಯ ಮಹತ್ವಾಕಾಂಕ್ಷೆ ಜಿಲ್ಲೆಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದು ಸ್ಥಳೀಯರಾದ ಅವರಿಗೆ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಕಳೆದ ೧೦ ವರ್ಷದಲ್ಲಿ
ಸಬ್ ಕಾ ಸಾಥ್-ಸಬ್ ಕಾ ವಿಕಾಸ-ಸಬ್ ಕಾ ವಿಶ್ವಾಸ ಪರಿಕಲ್ಪನೆಯಡಿ ದೇಶದ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಕ್ಷೇತ್ರದಲ್ಲಿ ಭಾರತ ದೇಶವು ಉನ್ನತ ಸ್ಥಾನ ತಲುಪಲು ಶ್ರಮಿಸುತ್ತಿರುವ ಮೋದಿಯವರ ಕೈಗಳನ್ನು ಬಲಪಡಿಸಲು,ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ರಾಜಾ ಅಮರೇಶ್ವರ ನಾಯಕರನ್ನು ಮತ್ತೊಮ್ಮೆ ಗೆಲ್ಲಿಸಲು ನಾವೆಲ್ಲರೂ ಕೆಲಸ ಮಾಡಿ ಕಳೆದ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮೀನರೆಡ್ಡಿ ಯಾಳಗಿ, ವಿಧಾನಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜಗೌಡ ವಿಭೂತಿಹಳ್ಳಿ, ಲೋಕಸಭಾದ ಉಸ್ತುವಾರಿಗಳಾದ ಗುರು ಕಾಮ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ರಾಜುಗೌಡ ಉತ್ನಾಳ್, ನಗರ ಮಂಡಲದ ಅಧ್ಯಕ್ಷರಾದ ದೇವೇಂದ್ರಪ್ಪ ಕೋನೇರ್ ,ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಶಂಕರ್ ಕರಗಣಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಾಂತಣ್ಣ ಚನ್ನೂರು ಸೇರಿದಂತೆ ಪಕ್ಷದ ವಿವಿಧ ಮೋರ್ಚಾದ ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.