ಜಿಲ್ಲೆಯ ಅಭಿವೃದ್ಧಿಗೆ ನೂತನ ಡಿಸಿ ಸಂಕಲ್ಪ

ಕೋಲಾರ,ಜೂ,೨೩- ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಜಿಲ್ಲಾಡಳಿತಕ್ಕೆ ನೌಕರರು ಸಹಕಾರ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸವನ್ನು ಜತೆಯಾಗಿ ನಿರ್ವಹಿಸೋಣ, ಜನತೆಗೆ ನ್ಯಾಯ ಒದಗಿಸೋಣ ಎಂದು ನೂತನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ನಗರದ ಜಿಲ್ಲಾಡಳಿತದ ಭವನದಲ್ಲಿ ಕೋಲಾರದ ನೂತನ ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ಅಕ್ರಂ ಪಾಷಾ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಹಾಗೂ ಜನತೆಯ ನಡುವೆ ಸೇತುವೆಯಾಗಿ ಸರ್ಕಾರಿ ನೌಕರರು ಕೆಲಸ ನಿರ್ವಹಿಸಬೇಕಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ನೌಕರರು ಪೂರ್ಣ ಸಹಕಾರ ನೀಡಿ ಎಂದ ಅವರು, ನೌಕರರ ಸಮಸ್ಯೆಗಳು ಏನೇ ಇದ್ದರೂ ನೇರವಾಗಿ ನನ್ನೊಂದಿಗೆ ಚರ್ಚಿಸಲು ಅವಕಾಶವಿದೆ, ನಿಮ್ಮ ಸಮಸ್ಯೆಗಳಿಗೂ ಜಿಲ್ಲಾಡಳಿತ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ಪುರುಷೋತ್ತಮ್,ನಿಕಟಪೂರ್ವ ಅಧ್ಯಕ್ಷರುಗಲಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಪದಾಧಿಕಾರಿಗಳಾದ ಜಂಟಿ ಕಾರ್ಯದರ್ಶಿಗಳಾದ ಪಿಡಿಒ ನಾಗರಾಜ್, ರವಿ, ಅಬಕಾರಿ ಇಲಾಖೆಯ ಮಂಜುನಾಥ್ ಮತ್ತಿತರರಿದ್ದರು.