ಜಿಲ್ಲೆಯಿಂದ ರಫ್ತು ಆಗಬಹುದಾದ ಬೇಳೆ ಕಾಳು-ಇತರೆ ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹಿಸಿಃ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

ವಿಜಯಪುರ, ನ.20-ಜಿಲ್ಲೆಯಿಂದ ದೇಶ ಮತ್ತು ವಿದೇಶಗಳಿಗೆ ರಫ್ತುಆಗಬಹುದಾದ ಗುಣಮಟ್ಟದ ಬೇಳೆಕಾಳು ಹಾಗೂ ಇತರೇ ಉತ್ಪನ್ನಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿರೂಪಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ಸಮ್ಮಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ರಫ್ತು ಉತ್ತೇಜನಾ ಸಮಿತಿ ಸಭೇಯ ಅಧ್ಯಕ್ಷತೆ ವಹಿಸಿದ ಅವರು ಜಿಲ್ಲೆಯಲ್ಲಿ ವಿಶೇಷವಾಗಿ ತೊಗರಿ, ಕಡಲೆ, ರಾಗಿ, ಶೇಂಗಾ, ಜೋಳ ಇತರೆ ಬೆಳೆಕಾಳು ಉತ್ಪಾದನೆಯಾಗುತ್ತಿವೆ ಸದ್ಯಕ್ಕೆ ತೊಗರಿ ಬೆಳೆ ಇಲ್ಲಿಂದ ಕಲಬುರ್ಗಿ ಮೂಲಕ ಬೆರೆ ಕಡೆ ರಫ್ತಾಗುತ್ತಿರುವ ಬಗ್ಗೆ ತಿಳಿದಿದ್ದು ಈ ಕುರಿತು ಸಮಗ್ರ ಮಾಹಿತಿ ಪಡೆಯುವಂತೆ, ಪ್ರತಿ ವರ್ಷ ರಫ್ತುಆಗುತ್ತಿರುವ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸುಂತೆ ಕೃಷಿ ಮತ್ತು ಕೈಗಾರಿಕೆ ಇಲಾಖೆ ಅದಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಂದ ರೂಪಿಸಲಾಗುತ್ತಿರುವ ಅಗರಬತ್ತಿ ಸೇರಿದಂತೆ ವಿವಿಧ ಗುಣಮಟ್ಟದ ರಫ್ತು ಉತ್ಪನ್ನಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು. ರೈಲು ಮೂಲಕ ರಫ್ತಾಗುತ್ತಿರುವ ನಿಂಬೆ ಹಣ್ಣು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರಮಾಣವಾರು ಮಾಹಿತಿ ಸಂಗ್ರಹಿಸುವಂತೆ ತಿಳಿಸಿದ ಅವರು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ವಿವಿಧ ಬೇಳೆಕಾಳುಗಳ ಗುಣಮಟ್ಟದ ಆಧಾರದ ಮೇಲೆ ರಫ್ತು ಮಾಡುವ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಬೆಳೆ ಕಾಳುಗಳ ಸಂಸ್ಕರಣೆಗೆ ಸಂಬಂಧಪಟ್ಟಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆ, ಮಾರುಕಟ್ಟೆ ಹಾಗೂ ರಫ್ತು ಸೌಲಭ್ಯಗಳು ಸೇರಿದಂತೆ ಇನ್ನಿತರ ಅವಶ್ಯಕತೆಗಳ ಬಗ್ಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ರಫ್ತು ಆಧಾರಿತ ಉತ್ಪನ್ನ ಮತ್ತು ವಸ್ತುಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕ್ರೀಯಾ ಯೋಜನೆ ರೂಪಿಸುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿರುವ ಕೈಗಾರಿಕೋಧ್ಯಮಗಳು ಮತ್ತು ವಾಣಿಜ್ಯೋಧ್ಯಮಿಗಳ ಮೂಲಕ ಉತ್ಪನ್ನಗಳ ರಫ್ತು ಅವಕಾಶಗಳ ಬಗ್ಗೆಯೂ ಗುರ್ತಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಹೋಟೆಲ ಉದ್ಯಮದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ನಲ್ಲಿ ಅಳವಡಿಸಬೇಕು ವಿಶೇಷವಾಗಿ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಶಿಸಲು ಹೋಟೆಲಗಳ ಜೊತೆಗೆ ಅಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಕಲೆಹಾಕುವಂತೆ ತಿಳಿಸಿದ ಅವರು ಹಂಪಿ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಶಿಸಲು ವಿವಿಧ ಸ್ಮಾರಕಗಳ ವ್ಯಾಪ್ತಿಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.. ಈ ಜಿಲ್ಲೆಯಲ್ಲಿಯೂ ಇಂಥಹ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುಂತೆ ಅವರು ಸೂಚನೆ ನೀಡಿ ಒಟ್ಟಾರೆ ಜಿಲ್ಲೆಯ ರಫ್ತು ಉದ್ಯಮ ಮತ್ತು ಪ್ರವಾಸಿರನ್ನು ಆಕಷಿರ್ಸಲು ಅವಶ್ಯಕ ಕ್ರಮಗಳ ಬಗ್ಗೆ ಅಧಿಕಾರಿಗಳು ಸಮಗ್ರ ವರದಿಯನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ಸೇರಿದಂತೆ ರಫ್ತು ಉತ್ತೇಜನ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.