ಜಿಲ್ಲೆಯಾಧ್ಯಾಂತ ವೆಂಕಟೇಶ್ವರ ದೇವಸ್ಥಾನಗಳಲ್ಲಿ
ವೈಕುಂಠ ಏಕಾದರ್ಶಿಯ ವಿಶೇಷ ಪೂಜೆ ದರ್ಶನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.02: ನಗರ ಮತ್ತು ಜಿಲ್ಲೆಯ ಹಲವಡೆ ಇರುವ ವೆಂಕಟೇಶ್ವರನ ದೇವಸ್ಥಾನಗಳಲ್ಲಿ ಇಂದು ವೈಕುಂಠ ಏಕಾದಶಿಯನ್ನು  ಬೆಳಗಿನಿಂದಲೇ ವಿಶೇಷ ಅಭಿಷೇಕ, ಪೂಜೆ, ಅಲಂಕಾರ, ಪ್ರಸಾದ ವಿತರಣೆಗಳೊಂದಿಗೆ ಭಕ್ತ ಸಮೂಹ ಆಚರಿಸುತ್ತಿದೆ.
ಇಂದು ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲಿಂನಿಂದ ವೆಂಕಟೇಶ್ವರನ ದರ್ಶನ ಪಡೆದರೆ ಜೀವನದಲ್ಲಿ ಮುಕ್ತಿ ದೊರೆಯುತ್ತದೆಂಬ ನಂಬಿಕೆಯಿಂದ ಭಕ್ತರು ಸಾಲಾಗಿ ನಿಂತು ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಸತ್ಯನಾರಾಯಣ ಪೇಟೆಯ ವೆಂಕಟೇಶ್ವರ ದೇವಸ್ಥಾನ, ಪಟೇಲನಗರದ ವೆಂಕಟೇಶ್ವರ ದೇವಸ್ಥಾನ,  ರಾಮೇಶ್ವರಿ ನಗರದ ವೆಂಕಟೇಶ್ವರ ದೇವಸ್ಥಾನ, ತಾಲೂಕಿನ ಬಾಲಜಿ ಕ್ಯಾಂಪಿನ ವೆಂಕಟೇಶ್ವರ ದೇವಾಲಯ, ರೂಪನಗುಡಿಯ ಪ್ರಾಚೀನ ವೆಂಕಟರಮಣನ ದೇವಾಲಯ ಸೇರಿದಂತೆ ಇತರಡೆಯ ವೆಂಕಟೇಶ್ವರನ ದೇವಸ್ಥಾನಗಳಲ್ಲಿ ಭಕ್ತರು ಮಡಿಯೊಂದಿಗೆ ಅಸಗಮಿಸಿ ಬೆಳಿಗ್ಗೆ ದರ್ಶನ ಪಡೆದರು.
ದೇವಸ್ಥಾನಗಳಲ್ಲಿ ಭಜನೆ, ಪಾರಾಯಣ, ಗೀತಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆದವು.