ಜಿಲ್ಲೆಯಾದ್ಯಂತ 37679 ಪ್ರಕರಣಗಳಿಂದ 15.32 ಕೋಟಿ ರೂ.ಇತ್ಯರ್ಥ:ನ್ಯಾ.ಎಸ್.ಕೆ.ಕನಕಟ್ಟೆ

ಬೀದರ. ಮಾ. 20: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಇವರು ರಾಷ್ಟ್ರೀಯ ಅದಾಲತ್ ನಡೆಸಲು ನಿರ್ದೇಶದನ್ವಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಜಿಲ್ಲೆಯಲ್ಲಿ ದಿನಾಂಕ 16-03-2024 ರಂದು ರಾಷ್ಟ್ರೀಯ ಲೋಕ ಅದಾಲತನ್ನು ಹಮ್ಮಿಕೊಂಡು ಜಿಲ್ಲೆಯಾದ್ಯಾಂತ ಒಟ್ಟು 37,679 ಗಳಿಂದ ಒಟ್ಟು ಮೊತ್ತ 15,32,91,627 ರೂಪಾಯಿಗಳಿಗೆ ಇತ್ಯರ್ಥಗೊಳಿಸಲಾಗಿದೆ ಹಾಗೂ ಇದರಲ್ಲಿ 16,638 (ಪೆಂಡಿಂಗನಲ್ಲಿನ) ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿ 10,74,68,581 ರೂ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಾದ್ಯಾಂತ ಒಟ್ಟು 21,041 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು 4,58,23,046 ರೂ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಬ್ಯಾಂಕ ವಸೂಲಾತಿ ಪ್ರಕರಣಗಳಿಗೆ ಸಂಬಂದಿಸಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕಗಳಿಂದ 7,997 ಪ್ರಕರಣಗಳನ್ನು ಗುರುತಿಸಿದ್ದು ಇವುಗಳಲ್ಲಿ 136 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1,33,47,150 ರೂ ಬಾಕಿ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ, ಪುರಸಭೆ ಗ್ರಾಮಪಂಚಾಯ್ತಗಳ ನೀರಿನ ತೆರಿಗೆ ಮತ್ತು ಬಿ.ಎಸ್.ಎನ್.ಎಲ್ ಜೆಸ್ಕಂ ಬಾಕಿ ಬಿಲ್ಲು ಮತ್ತು ಟ್ರಾಫಿಕ ವಸೂಲಾತಿಯಲ್ಲಿ 20,905 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 3,24,75,896 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಾಂತ ಸದರಿ ಲೋಕ ಆದಲಾತನಲ್ಲಿ 37,679 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 15,32,91,627 ರೂಪಾಯಿಗಳಿಗೆ ಪರಿಹಾರ, ವಸೂಲಾತಿ ಮೂಲಕ ಇತ್ಯರ್ಥ ಮಾಡಲಾಗಿದೆ. ಜಿಲ್ಲೆಯಾಧ್ಯಾಂತ ಈ ಲೋಕ ಆದಾಲತನಲ್ಲಿ ಒಟ್ಟು 05 ಜೋಡಿಗಳು ರಾಜಿ ಸಂಧಾನದ ಮೂಲಕ ಒಂದಾಗಿರುತ್ತಾರೆ ಎಂದು ಹೇಳಿದರು.
ಲೋಕ ಆದಲಾತನಲ್ಲಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಹಕರಿಸಿದ ಎಲ್ಲಾ ಇಲಾಖೆಯವರಿಗೂ ಹಾಗೂ ಜಿಲ್ಲೆಯಾದ್ಯಾಂತ ಹೆಚ್ಚಿನ ಪ್ರಚಾರ ಕೈಗೊಂಡ ಪತ್ರಿಕಾ ಮಾದ್ಯಮದವರಿಗೂ ಪ್ರಾಧಿಕಾರದ ಮುಲಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಜಗದೀಶ್ವರ, ಆಕಾಶ ಸಜ್ಜನ ಹಾಗೂ ರಾಹುಲ, ನಾಗರಾಜ, ಪ್ರೀತಿ, ಈರಮ್ಮ, ಜೀವನ, ಯೋಹನ ಸೇರಿದಂತೆ ಇತರರು ಉಪಸ್ಥಿತರಿದ್ದರು.