ಜಿಲ್ಲೆಯಾದ್ಯಂತ ನಮ್ಮ ನಡೆ ಮತಗಟ್ಟೆ ಕಡೆ-ಮತದಾನ ಜಾಗೃತಿ ಕಾರ್ಯಕ್ರಮ

ವಿಜಯಪುರ:ಮೇ.1: ಜಿಲ್ಲೆಯ ಸಿಂದಗಿ, ಚಡಚಣ, ಬಬಲೇಶ್ವರ, ಬಸವನಬಾಗೇವಾಡಿ, ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟೆ, ಕೊಲ್ಹಾರ ಹಾಗೂ ಇಂಡಿಯಲ್ಲಿ ನಮ್ಮ ನಡೆ ಮತಗಟ್ಟೆ ಹಾಗೂ ಮತದಾನ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಸಿಂದಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ : ರವಿವಾರ ಸಿಂದಗಿ ನಗರದಲ್ಲಿ ಚುನಾವಣೆ ಆಯೋಗದ ಆದೇಶದಂತೆ ನಮ್ಮ ನಡೆ ಮತಗಟ್ಟೆ ಕಡೆ ಎಂಬ ವಿನೂತನ ಕಾರ್ಯಕ್ರಮ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯತ್ ಸಿಂದಗಿ ಸಿಡಿಪಿಒ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ನಗರದ ಬಸ್ ನಿಲ್ದಾಣ ಮುಂದುಗಡೆ ಇರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಿಂದಗಿ ಚುನಾವಣಾಧಿಕಾರಿಗಳಾದ ಸಿದ್ರಾಮ ಮಾರಿಹಾಳ ಉದ್ಘಾಟಿಸಿ ಮಾತನಾಡಿ, ಮತದಾರರಿಗೆ ತಮ್ಮ ತಮ್ಮ ಮತಗಟ್ಟೆ ಯಾವುದು ಎಂದು ತೋರಿಸುವದು ಮತ್ತು ಮತ ಚಲಾಯಿಸಲು ಮತದಾನ ಜಾಗೃತಿ ಮಾಡುವದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಮುಖ್ಯಾಧಿಕಾರಿ ಮೋಹನ್ ಜಾಧವ, ಸಿಡಿಪಿಒ ಬಸವರಾಜ ಜಿಗಳೂರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಟಕ್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿತ್ಯಾನಂದ ಯಲಗೋಡ, ಶಿಕ್ಷಕ ರಾಜೇಂದ್ರ ನಿಂಬಾಳ್ಕರ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಬಸವರಾಜ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪುರಸಭೆ ನೌಕರರು ಮತ್ತು ಎಲ್ಲ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಡಚಣದಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ : ಚಡಚಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಚಡಚಣ ಹಾಗೂ ಪಟ್ಟಣ ಪಂಚಾಯಿತಿ ಚಡಚಣ ಇವರ ವತಿಯಿಂದ ಕರ್ನಾಟಕ ವಿಧಾನ ಸಭೆ ಚುನಾವಣೆ -2023 ರ ಕುರಿತು ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಎತ್ತಿನ ಗಾಡಿ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮತದಾನ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ 31-ನಾಗಠಾಣ ಮತಕ್ಷೇತ್ರದ ಎಮ್.ಸಿ.ಸಿ ನೋಡಲ್ ಅಧಿಕಾರಿಗಳಾದ ತಾಲೂಕಾ ಸ್ವೀಪ್ ಸಮಿತಿ ಅಧ್ಯಕರೂ ಆದ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ತಾಲೂಕು ಯೋಜನಾಧಿಕಾರಿಗಳಾದ ಶಿವದತ್ತ ಕೊಟ್ಟಲಗಿ, ಐಇಸಿ ಸಂಯೋಜಕ ವಿನೋದ ಸಜ್ಜನ, ಹಾಗೂ ಮತಗಟ್ಟೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು-ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಬಲೇಶ್ವರ ತಾಲೂಕಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ : ರವಿವಾರ ಬಬಲೇಶ್ವರ ಸರ್ಕಾರಿ ಎಂಪಿಎಸ್ ಶಾಲೆಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚುನಾವಣಾ ಅಧಿಕಾರಿ ಮಂಜುನಾಥ ಅವರು ಮಾತನಾಡಿ, ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬರು ಮತದಾನ ದಿನ ಮತದಾನದ ಹಕ್ಕನ್ನು ಚಲಾವಣೆ ಮಾಡಿ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಮುಂದಾಗುವಂತೆ ಕರೆ ನೀಡಿದರು.
ಕಾರ್ಯನಿರ್ವಾಹಕ ಅಧಿಕಾರಿ ಜೆ ಎಸ್, ಪಠಾಣ್ ಮಾತನಾಡಿ, ಮತದಾರರು ಯಾವುದೇ ಒತ್ತಡ ಆಶೆ, ಆಮಿಷಕ್ಕೆ ಒಳಗಾಗದೆ ಅಮೂಲ್ಯ ವಾದ ಹಕ್ಕು ಚಲಾಯಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮತದಾನ ಹೆಚ್ಚಿಸಲು ಜಾಗೃತಿ ಗೀತೆಗಳು, ವಿಡಿಯೋಗಳು ಪ್ರದರ್ಶಿಸಲಾಯಿತು. ಹಾಗೂ ಕಾಲ್ನಡಿಗೆ ಜಾಥಾ ಮೂಲಕ ಮನೆ ಮನೆ ಭೇಟಿ ಮಾಡಿ ಸಾರ್ವಜನಿಕರಿಗೆ ಮತದಾನದ ತಿಳುವಳಿಕೆ ನೀಡಲಾಯಿತು..
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಮೇಶ್ ಹಿಟ್ಟಣಿಗಿ, ಕಂದಾಯ ನಿರೀಕ್ಷಕರಾದ ಒ.ಕಾಜಾ ಹುಸೇನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಮೇನಕಾ ಛಲವಾದಿ, ಐಇಸಿ ಸಂಯೋಜಕ ಸಂಯೋಜಕ ಶಾಂತಪ್ಪ ಇಂಡಿ, ನಾಗೇಶ ಜಂಗಮಶೆಟ್ಟಿ ಪ್ರವೀಣ್ ಹಂಚಿನಾಳ ಇತರರು ಉಪಸ್ಥಿತರಿದ್ದರು.
ಬಸನವ ಬಾಗೇವಾಡಿ ತಾಲೂಕು. : ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಬಸವನ ಬಾಗೇವಾಡಿ ಇವರ ಸಹಯೋಗದಲ್ಲಿ ಬಸವನ ಬಾಗೇವಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದ ಅಂಗವಾಗಿ ಮತದಾನ ಜಾಗೃತಿ ಘೋಷವಾಕ್ಯನ್ನೊಳಗೊಂಡ ನಾಮಫಲಕಗಳೊಂದಿಗೆ ಸಂಚರಿಸಿ ಮತದಾನ ಜಾಗೃತಿ ಮೂಡಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಚೆಲುವಯ್ಯ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಧ್ವಜಾರೋಹಣ ಮತದಾನ ಜಾಗೃತಿ & ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ, ತಾಲೂಕಾ ಪಂಚಾಯತ್, ಅಧಿಕಾರಿ, ಸಿಬ್ಬಂದಿಗಳು, ಸಿಬ್ಬಂದಿಗಳು, ಬಿ.ಎಲ್.ಓ ಗಳು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು.
ಮುದ್ದೇಬಿಹಾಳ ತಾಲೂಕು : ರವಿವಾರ ಮುದ್ದೇಬಿಹಾಳ ನಗರದ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮತಗಟ್ಟೆ ಕೇಂದ್ರದಲ್ಲಿ ತಾಲೂಕ ಸ್ವೀಪ್ ಸಮಿತಿ, ತಾಲೂಕು ಪಂಚಾಯತಿ ಹಾಗೂ ಪುರಸಭೆ ಸಹಯೋಗದಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ಮನೆ-ಮನೆಗೆ ತೆರಳಿ ಮತದಾನ ಜಾಗೃತಿ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು. ತಾಲೂಕು ಪಂಚಾಯತಿ ವ್ಯವಸ್ಥಾಪಕರಾದ ಶ್ರೀಮತಿ ನಿರ್ಮಲಾ ತೋಟದ, ತಾಲೂಕು ಪಂಚಾಯತಿಯ ಶಾಂತಪ್ಪ ಬಂಗಾರಗುಂಡಿ, ಆನಂದ ಬಿರಾದಾರ, ಐಇಸಿ ಸಂಯೋಜಕ ಪರಮೇಶ ಹೊಸಮನಿ ಹಾಗೂ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಡಗುಂದಿ ತಾಲೂಕು : ರವಿವಾರ ನಿಡಗುಂದಿ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ತಾಲೂಕ ಸ್ವೀಪ್ ಸಮಿತಿ, ತಾಲೂಕು ಪಂಚಾಯತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ “ನಮ್ಮ ನಡೆ ಮತಗಟ್ಟೆ ಕಡೆ” ಕಾರ್ಯಕ್ರಮ ಆಯೋಜಿಸಲಾಯಿತು.
ಪಟ್ಟಣದ ಪ್ರಮುಖ ನಗರಗಳಲ್ಲಿ ಸಂಚರಿಸಿ ಮನೆ-ಮನೆಗೆ ತೆರಳಿ ಮತದಾನ ಜಾಗೃತಿ ಕರಪತ್ರಗಳನ್ನು ವಿತರಿಸಿ, ಮೇ 10ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಅರಿವು ಮೂಡಿಸಲಾಯಿತು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವ್ಹಿ.ಎಸ್.ಹಿರೇಮಠ, ಸಹಾಯಕ ನಿರ್ದೇಶಕರಾದ ಶ್ರೀ ಎಸ್.ಜೆ.ಉದಯಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ತಾಲೂಕು ಐಇಸಿ ಸಂಯೋಜಕ ದಸ್ತಗೀರ್ ಗುಡಿಹಾಳ, ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಇದ್ದರು.
ತಾಳಿಕೋಟಿ ತಾಲೂಕು : ತಾಳಿಕೋಟಿ ಪಟ್ಟಣದ ಕನ್ನಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ “ನಮ್ಮ ನಡೆ ಮತಗಟ್ಟೆ ಕಡೆ” ಕಾರ್ಯಕ್ರಮ ಅತೀ ಸಂಭ್ರಮ ಸಡಗರದಿಂದ ಹಮ್ಮಿಕೊಳ್ಳಲಾಯಿತು.
ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಆರ್.ಬಿರಾದಾರ, ಚುನಾವಣಾ ಧ್ವಜಾರೋಹಣ ನರೆವೇರಿಸಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರದಲ್ಲಿ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ಮತದಾನÀ ಕರ ಪತ್ರಗಳನ್ನು ಹಂಚಿ ಮತದಾನ ಜಾಗೃತಿ ಮೂಡಿಸಲಾಯಿತು.
ತಾಳಿಕೋಟಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಉದಯಕುಮಾರ ಘಟಕಾಂಬಳೆ, ಶಿರಸ್ತ್ತೆದಾರ ಜೆ.ಆರ್.ಜೈನಾಪೂರ. ಸಿ.ಆರ್.ಸಿ ರಾಜೂಸಿಂಗ್ ವಿಜಯಪುರ. ಐಇಸಿ ಸಂಯೋಜಕ ಮಲಕಪ್ಪ.ಬಿಎಮ್. ಪುರಸಭೆ ಮತ್ತು ತಾಲೂಕಾ ಪಂಚಾಯತ ಸಿಬ್ಬಂದಿ ವರ್ಗ, ಬಿ.ಎಲ್.ಓಗಳು, ಇಲಾಖೆಯ ಅಧಿಕಾರಿಗಳು, ಸ್ವಚ್ಛ ವಾಹಿನಿ ವಾಹನ, ಃಂಉ, ಅಎಅ, &ಗಿಂಈ ಸದಸ್ಯರು ಉಪಸ್ಥಿತರಿದ್ದರು.
ಕೊಲ್ಹಾರ ತಾಲೂಕು : ರವಿವಾರ ಕೊಲ್ಹಾರ ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಫ್. ಹೆಚ್. ಪಠಾಣ ಹಾಗೂ ತಹಸೀಲ್ದಾರ್ ಶ್ರೀಮತಿ ಎಮ್ ಎನ್ ರೇಣುಕಾ ಅವರು ಚುನಾವಣಾ ಧ್ವಜಾರೋಹಣ ನರೆವೇರಿಸಿದರು. ನಂತರ ಸಾರ್ವಜನಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಪಟ್ಟಣದಲ್ಲಿ ಜಾಥಾ ಹಮ್ಮಿಕೊಂಡು ಮನೆ – ಮನೆಗಳಿಗೆ ತೆರಳಿ ಮತದಾನದ ಜಾಗೃತಿ ಕರ ಪತ್ರಗಳನ್ನು ಹಂಚಿ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ /ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು, ಃಂಉ, ಅಎಅ, &ಗಿಂಈ ಸದಸ್ಯರು ಉಪಸ್ಥಿತರಿದ್ದರು.
ಇಂಡಿ ತಾಲೂಕು :ರವಿವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಇಂಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ‘ನಮ್ಮ ನಡೆ ಮತಗಟ್ಟೆ ಕಡೆ’ ಧ್ಯೇಯೋದ್ಧೇಶದಿಂದ ಘೋಷವಾಕ್ಯಗಳ ಒಳಗೊಂಡ ನಾಮಫಲಕಗಳೊಂದಿಗೆ ಸಂಚರಿಸಿ ಮತದಾನ ಜಾಗೃತಿ ಮುಡಿಸಲಾಯಿತು.
ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ್ ಮದ್ದಿನ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಧ್ವಜಾರೋಹಣ ಹಾಗೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ ಎಸ್ ಲಕ್ಷ್ಮೀಶ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ ರಾಠೋಡ, ತಾಲೂಕು ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಠೆ, ಪುರಸಭೆ ಮತ್ತು ತಾಲೂಕು ಪಂಚಾಯಿತಿಯ ವಿವಿಧ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಬಿ.ಎಲ್.ಓ ಗಳು, ಶಾಲಾ ಮುಖ್ಯ ಗುರುಗಳು, ಮಹಿಳಾ ಒಕ್ಕೂಟದ ಸದಸ್ಯರು ಸೇರಿದಂತೆ ರಸ್ತೆ ಬದಿಯ ವ್ಯಾಪಾರಸ್ಥರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.