ಜಿಲ್ಲೆಯಾದ್ಯಂತ ಕ್ರಿಸ್‍ಮಸ್ ಸಂಭ್ರಮ

ಕಲಬುರಗಿ: ಡಿ.25:ಜಿಲ್ಲೆಯಾದ್ಯಂತ ಶುಕ್ರವಾರ ಕ್ರಿಸ್‍ಮಸ್ ಸಂಭ್ರಮ ಮನೆ ಮಾಡಿದೆ. ಕ್ರೈಸ್ತ ಬಾಂಧವರು ಶೃದ್ಧಾ ಭಕ್ತಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ಕ್ರಿಶ್ಚಿಯನ್ ಸಮುದಾಯದವರು ಚರ್ಚ್‍ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ಸೆಂಟ್ ಮೇರಿ ಹಾಗೂ ಮೆಥೋಡಿಸ್ಟ್ ಚರ್ಚ್‍ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಿಶ್ವದಲ್ಲಿ ಶಾಂತಿ ನೆಲೆಸಲಿ, ದುಷ್ಟ ಶಕ್ತಿಗಳು ತೊಲಗಲಿ, ಎಲ್ಲರಿಗೂ ಸುಖ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದರು. ಕ್ರೈಸ್ತ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕ್ರಿಸ್‍ಮಸ್ ಹಿನ್ನೆಲೆಯಲ್ಲಿ ಚರ್ಚ್‍ಗಳ ಬಳಿ ವಿಶೇಷ ಅಲಂಕಾರ ಮಾಡಲಾಗಿತ್ತು. ಚರ್ಚ್‍ಗಳ ಮುಂದೆ ಏಸು ಕ್ರಿಸ್ತನ ಬದುಕನ್ನು ಬಿಂಬಿಸುವ ಗೋದಲಿಗಳನ್ನು ನಿರ್ಮಾಣ ಮಾಡಲಾಗಿತ್ತು.
ಮಹಾಮಾರಿ ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಸರಳವಾಗಿ ಕ್ರಿಸ್‍ಮಸ್ ಆಚರಿಸಲಾಯಿತು. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಸೈನಿಟೈಜರ್ ಬಳಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿತ್ತು.