ಜಿಲ್ಲೆಯಾದ್ಯಂತ ಕಾಮದಹನ

ಕಲಬುರಗಿ.ಮಾ.28: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ವಿವಿಧೆಡೆ ಹೋಳಿ ಹುಣ್ಣಿಮೆಯ ನಿಮಿತ್ಯ ಕಾಮದಹನ ಕಾರ್ಯಕ್ರಮ ನೆರವೇರಿದವು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹೊನ್ನಕಿರಣಗಿಯಲ್ಲಿ ಹೋಳಿ ಹುಣ್ಣಿಮೆಯ ಹಾಡುಗಳನ್ನು ಹಾಡಲಾಯಿತು.
ನಗರದ ವೀರೇಂದ್ರ ಪಾಟೀಲ್ ಕ್ಷೇಮಾಭಿವೃದ್ಧಿ ಸಂಘ ಎರಡನೇ ಹಂತ ಮತ್ತು ಸ್ವದೇಶಿ ಜಾಗರಣಾ ಮಂಚ್ ಸಹಯೋಗದೊಡನೆ ಹೋಳಿ ಹಬ್ಬದ ನಿಮಿತ್ಯ ಕಾಮದಹನ ಆಚರಿಸಲಾಯಿತು. ಹೋಳಿ ಹಬ್ಬದ ಪೌರಾಣಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆ, ದೃಷ್ಟಾಂತ ಸಹಿತ ಚಿಂತಕ ಮಹಾದೇವಯ್ಯ ಕರದಳ್ಳಿ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಸ್. ಬಿರಾದಾರ್, ಶ್ರೀಧರ್ ಭಂಡಾರಿ, ಪ್ರಕಾಶ್ ಸೂಗೂರೆ, ದತ್ತಾತ್ರೇಯ್ ಆಲಮೇಲಕರ್, ಜೆ. ನಾಗರಾಜ್, ಸಿದ್ಧರಾಮ್ ಕ್ಷೀರಸಾಗರ್, ಸುನೀಲ್ ನೀಮಕರ್, ಮನೋಹರ್ ಬಡಶೇಷಿ, ಗೌರೀಶ್ ಖಾಶಂಪುರ, ಸಂಜೀವಕುಮಾರ್ ಚಂದಾ, ಅಪ್ಪಾಸಾಹೇಬ್, ಶ್ರೀಮತಿ ವಿಜಯಲಕ್ಷ್ಮೀ, ಮಂಜುಳಾ ನಾಗರಾಜ್, ಶ್ರೀಮತಿ ಬಂಡಾರಿ, ಶ್ರೀಮತಿ ಪಾರ್ವತಿ ಬಿರಾದಾರ್, ಬಡಾವಣೆಯ ಪರಿವಾರಗಳ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ 30 ಜನ ಮಹಿಳೆಯರು, 20 ಮಕ್ಕಳು ಹಾಗೂ 25 ಪುರುಷರು ಭಾಗವಹಿಸಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ಸ್ವದೇಶಿ ಬಳಸಿ, ದೇಶ ಉಳಿಸಿ ಘೋಷಣೆಗಳನ್ನು, ಭಾರತ ಮಾತಾಕೀ ಜೈ ಜೈಕಾರ ಹಾಕಿ ಪಾರಂಪರಿಕ ರೀತಿಯಲ್ಲಿ ಹೋಳಿ ಆಚರಿಸಿದರು.