
ರಾಯಚೂರು, ಏ.೧೦- ಜಿಲ್ಲೆಯಾದಂತ ಏ.೧೪ ರಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಭಾವಚಿತ್ರ ಮೆರವಣಿಯ ಅದ್ದೂರಿ ಆಚರಣೆ ಪರವಾನಿಗೆ ನೀಡುವಂತೆ ನೀಡುವಂತೆ ಪ್ರಗತಿಪರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಯೂನಿಯನ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಏ.೧೪ ರಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಅದ್ದೂರಿ ಆಚರಣೆಗೆ ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಇರುವುದರಿಂದ ಜಯಂತೋತ್ಸವಕ್ಕೆ ಚುನಾವಣೆ ಆಯೋಗ ಪರವಾನಿಗೆ ನೀಡಿರುವುದಿಲ್ಲ ಇದರಿಂದ ದಲಿತರಿಗೆ ಮತ್ತು ಅಂಬೇಡ್ಕರ್ ರವರ ಅನುಯಾಯಿಗಳಿಗೆ ತುಂಬಾ ದುಃಖರ ವಿಷಯ ಎಂದರು. ಸಮಾನತೆಯ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ ಆದಕಾರಣ ಪರವಾನಿಗೆ ನೀಡುವಂತೆ ಆಗ್ರಹಿಸಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ವೇಳೆ ದ್ವನಿ ವರ್ಧಕಗಳನ್ನು ಅಳವಡಿಸುವುದರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು.
ಈ ಸಂದರ್ಭದಲ್ಲಿ ರಂಗಪ್ಪ ಆಸ್ಕಿಹಾಳ, ಕಡಗೋಳ್ ತಿಮ್ಮಪ್ಪ, ಆನಂದ ಏಗನೂರು, ವಿ. ಈರಣ್ಣ, ಸೇರಿದಂತೆ ಉಪಸ್ಥಿತರಿದ್ದರು