ಜಿಲ್ಲೆಯಲ್ಲಿ 6 ಜನ ಕೋವಿಡ್ ಸೋಂಕಿತರ ಸಾವು: ಜಿಲ್ಲಾಧಿಕಾರಿ

ವಿಜಯಪುರ, ಜೂ.2-ಜಿಲ್ಲೆಯಲ್ಲಿ 6 ಜನ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 66 ವರ್ಷದ ವೃದ್ಧ ರೋಗಿ ಸಂಖ್ಯೆ 2104296, ಅವರು ಮೃತಪಟ್ಟಿದ್ದಾರೆ. ಅವರು ಸಾರಿ, ಜ್ವರ, ರಕ್ತದೊತ್ತಡ ತೊಂದರೆಯಿಂದ ಬಳಲಿ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದರಂತೆ 25 ವರ್ಷದ ಯುವತಿ ರೋಗಿ ಸಂಖ್ಯೆ 2109470, ಐ ಎಲ್ ಐ ಉಸಿರಾಟದ ತೊಂದರೆಯಿಂದ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಅವರು ಮೃತಪಟ್ಟಿದ್ದಾರೆ.
ಇನ್ನೋರ್ವ 70 ವರ್ಷದ ವೃದ್ಧ ರೋಗಿ ಸಂಖ್ಯೆ 1967348, ಜ್ವರ, ಮಧುಮೇಹ, ತೊಂದರೆಯಿಂದ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಮೃತಪಟ್ಟಿದ್ದಾರೆ.
50 ವರ್ಷದ ವೃದ್ಧೆ ರೋಗಿ ಸಂಖ್ಯೆ 2314203, ಸಾರಿ, ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಬಳಲಿ, ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದರಂತೆ 52 ವರ್ಷದ ವೃದ್ಧೆ ರೋಗಿ ಸಂಖ್ಯೆ 2312985, ಐ.ಎಲ್.ಐ, ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಬಳಲಿ ತಾಲೂಕು ಆಸ್ಪತ್ರೆ ಸಿಂದಗಿಯಲ್ಲಿ ದಾಖಲಾಗಿದ್ದರು. ಅವರೂ ಮೃತಪಟ್ಟಿದ್ದಾರೆ.
22 ವರ್ಷದ ಯುವತಿ ರೋಗಿ ಸಂಖ್ಯೆ 2378219, ಸಾರಿ, ಉಸಿರಾಟದ ತೊಂದರೆಯಿಂದ ಬಳಲಿ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರೂ ಮೃತಪಟ್ಟಿದ್ದಾರೆ.
ಇವರೆಲ್ಲರ ಅಂತ್ಯಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.