ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರ ಸಾವುಃ ಜಿಲ್ಲಾಧಿಕಾರಿ

ವಿಜಯಪುರ, ಮೇ.30-ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 39 ವರ್ಷದ ಪುರುಷ ರೋಗಿ ಸಂಖ್ಯೆ 1545167 ಅವರು ಮೃತಪಟ್ಟಿದ್ದಾರೆ. ಅವರು ಐ.ಎಲ್.ಐ. ಉಸಿರಾಟದ ತೊಂದರೆಯಿಂದ ಬಳಲಿ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದರಂತೆ 35 ವರ್ಷದ ಪುರುಷ ರೋಗಿ ಸಂಖ್ಯೆ 1732708, ಐ.ಎಲ್.ಐ, ಉಸಿರಾಟದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಅವರು ಮೃತಪಟ್ಟಿದ್ದಾರೆ.
ಇನ್ನೋರ್ವ 67 ವರ್ಷದ ವೃದ್ಧ ರೋಗಿ ಸಂಖ್ಯೆ 1514945 ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಮೃತಪಟ್ಟಿದ್ದಾರೆ.
60 ವರ್ಷದ ವೃದ್ಧ ರೋಗಿ ಸಂಖ್ಯೆ 1732706, ಐ.ಎಲ್.ಐ, ಉಸಿರಾಟದ ತೊಂದರೆ, ರಕ್ತದೊತ್ತಡ, ಅಸ್ತಮಾದಿಂದ ಬಳಲಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರೆಲ್ಲರ ಅಂತ್ಯಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.