ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರ ಸಾವು: ಜಿಲ್ಲಾಧಿಕಾರಿ

ವಿಜಯಪುರ, ಮೇ.29-ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 55 ವರ್ಷದ ವೃದ್ಧ ರೋಗಿ ಸಂಖ್ಯೆ 1869685, ಅವರು ಮೃತಪಟ್ಟಿದ್ದಾರೆ. ಅವರು ಉಸಿರಾಟದ ತೊಂದರೆಯಿಂದ ಬಳಲಿ ತಾಲೂಕ ಸಿಂದಗಿ ಆಸ್ಪತ್ರೆ ಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದರಂತೆ 45 ವರ್ಷದ ಮಹಿಳೆ ರೋಗಿ ಸಂಖ್ಯೆ 2081698, ಉಸಿರಾಟದ ತೊಂದರೆಯಿಂದ ಮುದ್ದೇಬಿಹಾಳ ತಾಲೂಕ ಆಸ್ಪತ್ರೆಗೆ ದಾಖಲಾಗಿದ್ದರು ಅವರು ಮೃತಪಟ್ಟಿದ್ದಾರೆ.
ಇನ್ನೋರ್ವ 80 ವರ್ಷದ ವೃದ್ಧೆ ರೋಗಿ ಸಂಖ್ಯೆ 2312975, ಉಸಿರಾಟದ ತೊಂದರೆಯಿಂದ ಸಿಂದಗಿ ತಾಲೂಕ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಮೃತಪಟ್ಟಿದ್ದಾರೆ.
58 ವರ್ಷದ ವೃದ್ಧೆ ರೋಗಿ ಸಂಖ್ಯೆ 2301829, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲಿ, ಮುದ್ದೇಬಿಹಾಳ ತಾಲೂಕ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರೆಲ್ಲರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.