ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರ ಸಾವು

ವಿಜಯಪುರ, ಜೂ.6-ಜಿಲ್ಲೆಯಲ್ಲಿ 4 ಜನ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 40 ವರ್ಷದ ಪುರುಷ ರೋಗಿ ಸಂಖ್ಯೆ 1769677, ಅವರು ಮೃತಪಟ್ಟಿದ್ದಾರೆ. ಅವರು ಐ.ಎಲ್.ಐ ಹಾಗೂ ಉಸಿರಾಟದ ತೊಂದರೆಯಿಂದ ಬಳಲಿ ವಿಜಯಪುರ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅದರಂತೆ 60 ವರ್ಷದ ವೃದ್ಧ ರೋಗಿ ಸಂಖ್ಯೆ 1735813, ಐ.ಎಲ್.ಐ, ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆ ವಿಜಯಪುರದಲ್ಲಿ ದಾಖಲಾಗಿದ್ದರು ಅವರು ಮೃತಪಟ್ಟಿದ್ದಾರೆ.
ಇನ್ನೋರ್ವ 55 ವರ್ಷದ ಮಹಿಳೆ ರೋಗಿ ಸಂಖ್ಯೆ 1374071, ಐ.ಎಲ್.ಐ ಹಾಗೂ ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆ ವಿಜಯಪುರದಲ್ಲಿ ದಾಖಲಾಗಿದ್ದರು ಆದರೆ ಮೃತಪಟ್ಟಿದ್ದಾರೆ.
52 ವರ್ಷದ ಪುರುಷ ರೋಗಿ ಸಂಖ್ಯೆ 1735814, ಉಸಿರಾಟದ ತೊಂದರೆಯಿಂದ ಬಳಲಿ, ಖಾಸಗಿ ಆಸ್ಪತ್ರೆ ವಿಜಯಪುರದಲ್ಲಿ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರೆಲ್ಲರ ಅಂತ್ಯಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.