ಬಳ್ಳಾರಿ,ಏ.27: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜಿಲ್ಲೆಯಲ್ಲಿ 2023ರ ಮತದಾರರ ಅಂತಿಮ ಪಟ್ಟಿಯನ್ವಯ ಒಟ್ಟು 11,52,411 ಮತದಾರರಿದ್ದಾರೆ. 5,67,319 ಪುರುಷ ಮತದಾರರು, 5,84,920 ಮಹಿಳಾ ಮತದಾರರು ಹಾಗೂ 172 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದು, ಒಟ್ಟಾರೆಯಾಗಿ 39,359 ಯುವ ಮತದಾರರ ನೊಂದಣಿಯಾಗಿದೆ. 16,845 ಜನ 80 ವರ್ಷ ಮೇಲ್ಪಟ್ಟ ಮತದಾರರು, 15,105 ವಿಶೇಷ ಚೇತನ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ:
ಕಂಪ್ಲಿ ವಿಧಾನಸಭಾ ಕ್ಷೇತ್ರ:
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,06,528 ಪುರುಷ ಮತದಾರರು, 1,07,882 ಮಹಿಳೆ ಮತದಾರರು ಹಾಗೂ 29 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,14,439 ಮತದಾರರಿದ್ದಾರೆ. ಅದರಲ್ಲಿ 8,084 ಯುವ ಮತದಾರರು, 2,509 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,331 ವಿಶೇಷ ಚೇತನ ಮತದಾರರಿದ್ದಾರೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ:
92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 1,06,789 ಪುರುಷ ಮತದಾರರು, 1,10,354 ಮಹಿಳೆ ಮತದಾರರು ಹಾಗೂ 38 ಜನ ಇತರೆ ಮತದಾರರಿದ್ದು, ಒಟ್ಟು 2,17,181 ಮತದಾರರಿದ್ದಾರೆ. ಅದರಲ್ಲಿ 7,024 ಯುವ ಮತದಾರರು, 3,128 ಜನ 80 ವರ್ಷ ಮೇಲ್ಪಟ್ಟ ಮತದಾರರು, 3,696 ವಿಶೇಷಚೇತನ ಮತದಾರರಿದ್ದಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:
93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕೇತ್ರದಲ್ಲಿ 1,16,096 ಪುರುಷ ಮತದಾರರು, 1,22,181 ಮಹಿಳೆ ಮತದಾರರು ಹಾಗೂ 49 ಜನ ಇತರೆ ಮತದಾರರಿದ್ದು, ಒಟ್ಟು 2,38,326 ಮತದಾರರಿದ್ದಾರೆ. ಅದರಲ್ಲಿ 7,940 ಯುವ ಮತದಾರರು, 3,436 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 3,001 ವಿಶೇಷ ಮತದಾರಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1,26,067 ಪುರುಷ ಮತದಾರರು, 1,33,087 ಮಹಿಳೆ ಮತದಾರರು ಮತ್ತು 30 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿ ಒಟ್ಟು 2,59,184 ಮತದಾರರಿದ್ದಾರೆ.
ಅದರಲ್ಲಿ 8,432 ಯುವ ಮತದಾರರು, 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,383 ವಿಶೇಷ ಚೇತನ ಮತದಾರರಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ:
95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 1,11,839 ಪುರುಷ ಮತದಾರರು, 1,11,416 ಮಹಿಳೆ ಮತದಾರರು ಮತ್ತು ಇತರೆ 26 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಒಳಗೊಂಡು ಒಟ್ಟು 2,23,281 ಮತದಾರರಿದ್ದಾರೆ. ಈ ಪೈಕಿ 7,879 ಯುವ ಮತದಾರರು, 3,081 ಜನ ವಯಸ್ಕ ಮತದಾರರು, 2,694 ವಿಶೇಷಚೇತನ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.