ಜಿಲ್ಲೆಯಲ್ಲಿ ೧೫ ಲಕ್ಷ ಜನರಿಗೆ ಗರೀಬ್ ಕಲ್ಯಾಣ ಅಕ್ಕಿ ಸೌಲಭ್ಯ

ರಾಯಚೂರು.ಸೆ.೨೫- ಬಡವರ ಹಸಿವು ನೀಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ತಿಂಗಳು ಪಡಿತರದೊಂದಿಗೆ ಹೆಚ್ಚುವರಿಯಾಗಿ ಈ ವಿಶೇಷ ಪಡಿತರವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಹೊಂದಿರುವಂತೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಹೇಳಿದರು.
ವಾರ್ಡ್ ೨೫, ೩೦ ರಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಜನರಿಗೆ ಯಾವುದೇ ಸಂಕಷ್ಟವಾಗದಂತೆ ಪ್ರಧಾನಮಂತ್ರಿ ಈ ಪರ್ಯಾಯ ಅಕ್ಕಿ ವಿತರಣೆ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದರಿಂದ ದೇಶದ ಅನೇಕರು ತಮ್ಮ ಹಸಿವು ನೀಗಿಸಿಕೊಳ್ಳಲು ನೆರವಾಗಿದೆ. ದೇಶದ ೭೦ ಕೋಟಿ ಜನರಿಗೆ ಗರೀಬ್ ಕಲ್ಯಾಣ ಯೋಜನೆ ೫ ಕೆಜಿ ಅಕ್ಕಿ ವಿತರಿಸಲಾಗಿದೆ. ಜಿಲ್ಲೆಯಲ್ಲಿ ೧೫ ಲಕ್ಷ ಜನರಿಗೆ ಈ ಸೌಲಭ್ಯ ದೊರೆಯಲಿದೆಂದು ಹೇಳಿದ ಅವರು, ಪ್ರತಿಯೊಬ್ಬರು ಈ ಅಕ್ಕಿಯನ್ನು ಪಡೆಯುವ ವ್ಯವಸ್ಥೆ ಸಕ್ರಮವಾಗಿ ನಡೆಯಬೇಕು.
ಈ ಸಂದರ್ಭದಲ್ಲಿ ಶಾಸಕರಾದ ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ದೊಡ್ಡ ಮಲ್ಲೇಶ, ರವೀಂದ್ರ ಜಲ್ದಾರ್, ಕಡಗೋಳ ಆಂಜನೇಯ್ಯ, ಶಶಿರಾಜ್, ಮಹೇಂದ್ರ ರೆಡ್ಡಿ, ಸೌತ್ ಸೆಂಟ್ರ್‌ಲ್ ರೈಲ್ವೆ ಸದಸ್ಯರಾದ ಬಾಬುರಾವ್, ಎನ್. ಶ್ರೀನಿವಾಸರೆಡ್ಡಿ, ಯೂಸುಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.