ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗುಣಮುಖರ ಸಂಖ್ಯೆ-ಸಾವಿನ ಏರಿಕೆ

ಚಾಮರಾಜನಗರ, ಮೇ 20- ಸತತ 4ನೇ ದಿನವೂ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚಿದ್ದು 576 ಹೊಸ ಕೋವಿಡ್ ಕೇಸ್ ಪತ್ತೆಯಾದರೆ 665 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 3,673ಕ್ಕೆ ಇಳಿದಿದ್ದು, 48 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2,242 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. 7,488 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. 2 ಸಾವಿರಕ್ಕೂ ಹೆಚ್ಚ ಟೆಸ್ಟ್ ನಡೆಸುತ್ತಿದ್ದ ಆರೋಗ್ಯ ಇಲಾಖೆ ಇಂದು ಕೇವಲ 1,595 ಮಂದಿಗμÉ್ಟೀ ಪರೀಕ್ಷೆ ನಡೆಸಿದೆ.
17 ಮಂದಿ ಸಾವು : ಕೊರೊನಾ ಗುಣಮುಖರಾದವರ ಸಂಖ್ಯೆ ಹೆಚ್ಚಾದರೂ ಸೋಂಕಿತರ ಸಂಖ್ಯೆ ಯಥಾಪ್ರಕಾರ ಮುಂದುವರೆದಿದ್ದು, ಸಾವಿನ ಸರಣಿಯು ಸಹ ಏರುತ್ತಲೇ ಇದೆ. ಇಂದು 24 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.