ಜಿಲ್ಲೆಯಲ್ಲಿ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿ ಜರುಗಬೇಕು: ಹಾಸಿಂಪೀರ

ವಿಜಯಪುರ, ಡಿ.19-ಭಾರತೀಯ ಶಾಸ್ತ್ರೀಯ ಸಂಗೀತ ಕರ್ನಾಟಕ ಸಂಗೀತ ಪ್ರಖ್ಯಾತ ಹೊಂದಿದೆ. ಜೆಲ್ಲೆಯಲ್ಲಿ ಸಂಗೀತ ತರಬೇತಿ ಹಾಗು ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿ ಜರುಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ತೊರವಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತು ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಡಿಯಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳವ ಉದ್ದೇಶವಿದೆ. ಸಂಗೀತ ಪ್ರಿಯರು ಈ ಜಿಲ್ಲೆಯಲ್ಲಿ ಸಾಕಷ್ಟು ಇರುವದರಿಂದ ಸಂಗೀತ ಕಾರ್ಯಕ್ರಮ ಯೋಜನೆ ಅತ್ಯಗತ್ಯ. ಇತ್ತಿತ್ತಲಾಗಿ ಸಂಗೀತ ಕಲಾವಿದರು ರೆಕಾಡಿರ್ಂಗ್ ಮ್ಯುಸಿಕ್ ಅಳವಡಿಸಿಕೊಂಡು ಹಾಡುತ್ತಿರುವದರಿಂದ ಸಂಗೀತದ ಮೌಲ್ಯ ಹಾಳಾಗುತ್ತಿದೆ ಎಂದರು
ಸಂಗೀತ ಕ್ಷೇತ್ರಕ್ಕೆ ಪುರಂದರದಾಸರ ಕನಕದಾಸರ .ಪಂಡಿತ ಪಂಚಾಕ್ಷರಿ ಹಾಗು ಹಾಗು ಪಂಡಿತ ಪುಟ್ಟರಾಜ ಗವಾಯಿಗಳ ಸೇವೆ ಅಪಾರವಾಗಿದೆ ಎಂದರು.
ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತು ಜಿಲ್ಲಾ ಅಧ್ಯಕ್ಷೆ ಶಶಿಕಲಾ ಹಿರೇಮಠ, ಚನಬಸಯ್ಯಾ ಹಿರೇಮಠ, ಸುರೇಶಗೌಡ ಬಿರಾದಾರ, ದಯಾನಂದ ತಂಗಡಿ, ರಾಜು ಗಾರಗೆ, ಲಕ್ಕಪ್ಪ ನಡಗಡ್ಡಿ, ಶ್ವೇತಾ ಪವಾರ, ದೇವಮ್ಮಾ ಕಪ್ಪರದಮಠ, ಭಾಗ್ಯಶ್ರೀ ಸಿಂಹಾಸನಮಠ, ಗುರುಪಾದಯ್ಯಾ ತಳಸದಾರ (ಹಿರೇಮಠ) ಸಂಗೀತ ನಾಲವಾರ ಮುಂತಾದವರು ಭಾಗವಹಿಸಿದ್ದರು.