ಜಿಲ್ಲೆಯಲ್ಲಿ ಶೇ.10.47 ಶಾಂತಿಯುತ ಮತದಾನ: ಡಿ.ಸಿ

ಸಂಜೆವಾಣಿ ವಾರ್ತೆ
ಬೀದರ್;ಮೇ.7: 9 ಗಂಟೆಗೆ ಜಿಲ್ಲೆಯಲ್ಲಿ ಶೇಕಡಾ 10.47 ಪ್ರತಿಶತ ಮತದಾಮವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಇಂದು ನಗರದ ಹಳೆ ಸೀಟಿಯಲ್ಲಿರುವ ರಲರ ಸಂಖ್ಯೆ 105ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಸರಾಸರಿ ಶೇಕಡಾ 81 ಪ್ರತಿಶತ ಮತದಾನ ಆಗಬೇಕೆಂಬುದು ನಮ್ಮ ಬಯಕೆಯಾಗಿದೆ.ಅದಕ್ಕಾಗಿ ಎಲ್ಲ ಸಿದ್ದತೆ ಮಾಡಲಾಗಿದೆ. ಇಂದು ಬಿಸಿಲು ಅತಿ ಹೆಚ್ಚು ಅಂದರೆ ಸರಾಸರಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಧ್ಯಾಹ್ನ ಕೊಂಚ ಕಡಿಮೆ ಮತದಾನ ಆದರೂ ಸಾಯಂಕಾಲ ಹೆಚ್ಚು ಮತದಾನ ಆಗಬಹುದೆಂಬ ನಿರಿಕ್ಷೆ ಇದೆ. ಮಧ್ಯಾಹ್ನ ಮತಗಟ್ಟೆಗೆ ಬರುವ ಮತದಾರರಿಗೆ ಬಿಸಿಲು ಝಳದಿಂದ ಸುರಕ್ಷಿತವಾಗಿರಲು ಎಲ್ಲ ಕಡೆ ಶಾಮಿಯಾನ ಹಾಕಲಾಗಿದೆ. ವೇಟಿಂಗ್ ರೂಮ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಕಿ ಮತದಾರರನ್ನು ಆಕರ್ಶಿಸಲು ಜಿಲ್ಲೆಯ ಏತಿಹಾಸಿಕ ಸ್ಥಳಗಳ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಬೀದರ್ ನಗರದಲ್ಲಿ ಬಿದ್ರಿ ಮತಗಟ್ಟೆ, ಬಸವಕಲ್ಯಾಣದ ನಾರಾಯಣಪುರ ಗ್ರಾಮದಲ್ಲಿ ಅನುಭವ ಮಂಟಪ, ಹುಮನಾಬಾದ್ ನಲ್ಲಿ ಜಲಸಿಂಗಿ ಮಹಾದೇವ ದೇವಾಲಯದ ಚಿತ್ರ ಹೀಗೆ ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು, 30 ಸಖಿ ಮತದಾನ ಕೇಂದ್ರಗಳನ್ನು, ಪ್ರತಿ ವಿಧಾನ ಸಭೆ ಕ್ಷೇತ್ರಕ್ಕೊಂದರಂತೆ ವಿಕಲಚೇತನ ಹಾಗೂ ಯುವ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲಾ ಪೆÇೀಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಬೀದರ್ ಜಿಲ್ಲೆ ಯಾವತ್ತೂ ಶಾಂತಿಪ್ರಿಯ ಜಿಲ್ಲೆ ಎಂಬುದು ಪ್ರತೀತಿ. ಹಾಗಾಗಿ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುದಿಲ್ಲ ಎಂಬ ವಿಶ್ವಾಸ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೆÇೀಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಾರಾ ಮಿಲಿಟರಿ, ರಿಜರ್ವ್ ಪೆÇೀಲಿಸ್ ತುಕಡಿ, ಅರಣ್ಯ ಇತ್ಯಾದಿ ಪೆÇೀಲಿಸ್ ತುಕಡಿ ನಿಯೋಜಿಸಲಾಗಿದೆ. ಮತದಾರರು ಜಿಲ್ಲಾಡಳಿತದೊಂದಿಗೆ ಸಹಕರಿಸಿ ಶಾಂತಿಯುತವಾಗಿ ಅಲ್ಲದೇ ಕಡ್ಡಾಯವಾಗಿ ಮತದಾನ ಚಲಾಯಿಸಬೇಕೆಂದು ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದರು.
ಉಭಯ ಅಧಿಕಾರಿಗಳು ಬಿದ್ರಿ ಮತಗಟ್ಟೆ, ಪಿಂಕ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶಿಲಿಸಿದರು.