ಜಿಲ್ಲೆಯಲ್ಲಿ ಶೂನ್ಯಕ್ಕಿಳಿದ ಕೊರೊನಾ

ರಾಯಚೂರು ಡಿ 31:-ಎರಡನೇ ಪ್ರಬೇಧ ಸುದ್ಧಿಯ ಮಧ್ಯ ಸದ್ಧಿಲ್ಲದೆ ಜಿಲ್ಲೆಯಿಂದ ಕೊರೊನಾ ಕಾಲುಕಿತ್ತಿದೆ ಎನ್ನುವ ಸಂತಸ ಇಂದು ಜಿಲ್ಲೆಯ ಜನ ವ್ಯಕ್ತ ಪಡಿಸಿದರು.
2020 ಮಾರ್ಚ್ ನಿಂದ ದೇಶದಲ್ಲಿ ಲಾಕ್ ಡೌನ್ ಕಂಕಷ್ಟ ಎದುರಿಸದ ಜನರಿಗೆ ವರ್ಷದ ಕೊನೆಯ ದಿನವಾದ ಇಂದು ಜಿಲ್ಲೆಯಲ್ಲಿ ಶೂನ್ಯ ಕೊರೊನಾ ವರದಿ ಅಚ್ಚರಿ ಮೂಡಿಸಿದೆ.
ಇಂದು 1464 ಜನರ ದ್ರವ ಪರೀಕ್ಷೆಗೊಳ ಪಡಿಸಲಾಗಿತ್ತು. ಇಲ್ಲಿಯವರೆಗಿನ ತಪಾಸಣೆಯಲ್ಲಿ ಶೂನ್ಯ ಕೊರೊನಾ ವರದಿ ಇದೆ ಪ್ರಪ್ರಥಮವಾಗಿದೆ. 2020 ಕೊನೆಯ ದಿನಕ್ಕೆ ಶೂನ್ಯವಾಗಿರುವುದು ಶುಭ ಸಂಕೇತ ಎನ್ನುವ ಸಂತಸ ಮೂಡಿಸಿದೆ.
ಇಂದಿಗೆ ಕೊರೊನಾ ಕೊನೆಯಾಗಲಿ ಎನ್ನುವ ಆಸೆ ಈಡೇರುವುದೆ ಎಂದು 2021 ನೂತನ ವರ್ಷವೇ ಹೇಳಬೇಕು.