ಜಿಲ್ಲೆಯಲ್ಲಿ ಶುಕ್ರವಾರ 485 ಮಂದಿಗೆ ಕೊರೋನಾ ದೃಢ

ವಿಜಯಪುರ, ಮೇ.01-ಜಿಲ್ಲೆಯಲ್ಲಿ ಶುಕ್ರವಾರ 485 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 473 ಸೋಂಕಿತರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 66 ವರ್ಷದ ವೃದ್ಧ (ರೋಗಿ ಸಂಖ್ಯೆ- 1278226), 66 ವರ್ಷದ ವೃದ್ಧ (ರೋಗಿ ಸಂಖ್ಯೆ- 1338521) ಹಾಗೂ 60 ವರ್ಷದ ವೃದ್ಧೆ (ರೋಗಿ ಸಂಖ್ಯೆ 1072418) ಸೇರಿದಂತೆ ಮತ್ತೆ ಮೂವರು ಸಾವಿಗೀಡಾಗಿದ್ದು, ಇಲ್ಲಿವರೆಗೆ ಜಿಲ್ಲೆಯಲ್ಲಿ 238 ಜನರು ಅಸುನೀಗಿದ್ದಾರೆ ಎಂದರು.
ನಗರದಲ್ಲಿ 192, ವಿಜಯಪುರ ಗ್ರಾಮೀಣ 39, ಬಬಲೇಶ್ವರ 4, ತಿಕೋಟಾ 4, ಬಸವನಬಾಗೇವಾಡಿ 54, ಕೊಲ್ಹಾರ 1, ನಿಡಗುಂದಿ 3, ಇಂಡಿ 45, ಚಡಚಣ 6, ಮುದ್ದೇಬಿಹಾಳ 66, ತಾಳಿಕೋಟೆ 7, ಸಿಂದಗಿ 60 ಹಾಗೂ ಇತರೆ ಜಿಲ್ಲೆಯ 4 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.