ಜಿಲ್ಲೆಯಲ್ಲಿ ವೈನ ಪಾರ್ಕ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಆಸರೆಯಾಗಲು ಕರೆ : ಸಂಗಮೇಶ ಸಗರ

(ಸಂಜೆವಾಣಿ ವಾರ್ತೆ)
ವಿಜಯಪುರ : ಜು.31: ಇಡೀ ನಾಡಿನ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಶೇ 70 % ರುಚಿಕಟ್ಟಾದ ದ್ರಾಕ್ಷಿ( ಮನೂಕು) ಬೆಳೆದು, ದೇಶ ವಿದೇಶಿಗಳಿಗೆ ರಪ್ತು ಮಾಡುವ ಹೆಮ್ಮೆ ನಮ್ಮ ವಿಜಯಪುರ ಜಿಲ್ಲೆಯ ರೈತರದ್ದು, ಇಂದು ನಮ್ಮ ರೈತರು ಬೆಳೆದ ದ್ರಾಕ್ಷಿ(ಮನೂಕು)ಯ ಬೆಲೆ ಕುಸಿದು ರೈತರ ಬಾಳು ಕಂಗೆಡುವಂತಾಗಿದೆ, ಮಾಡಿರುವ ಖರ್ಚು ಸಹ ಬಾರದೇ ರೈತ ಆತ್ಮ ಹತೈಗೆ ಶರಣಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಸರಕಾರ ದ್ರಾಕ್ಷಿಗೆ ಬೆಂಬಲ ಬೆಲೆ ನೀಡಿ ಖರೀದಿಸಲಿ ಎಂದು ಹಲವು ಬಾರಿ ಮನವಿ ಸಲ್ಲಿಸಿ, ಮಾನ್ಯ ಮುಖ್ಯ ಮಂತ್ರಿಗಳನ್ನು ಬೇಟಿ ಮಾಡಿಬಂದರು ಪ್ರಯೋಜನವಾಗಿಲ್ಲ, ಬೆಳೆದ ಬೆಳೆ ಕೋಲ್ಡಸ್ಟೋರೆಜ್‍ನಲ್ಲಿ ಇಡಲು ಹಣ ಕೊಡಲಾಗದೇ ರೈತರು ಕಷ್ಟಪಡುವಂತಾಗಿದೆ.
ಜಿಲ್ಲೆಯಲ್ಲಿ ತನ್ನದೇ ಸ್ವತಂ ಬ್ರ್ಯಾಂಡ್‍ನ ಅಡಿಯಲ್ಲಿ ವೈನ್ ತಯಾರಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮಾರುಕಟ್ಟೆ ಕಲ್ಪಿಸಲು ಕಳೆದ ಸರಕಾರ 100 ಕೋಟಿ ಮತ್ತು ಸಮೀಪದ ಇಟ್ಟಂಗಿಹಾಳದಲ್ಲಿ 141 ಎಕರೆ ಭೂಮಿ ಗುರುತಿಸಿ ವೈನ್ ಪಾರ್ಕ ಮಾಡಲು ಯೋಜನೆ ರೂಪಿಸಲಾಗಿತ್ತು, ಮುಂದುವರೆದು ಈ ಯೋಜನೆ ಪೂರ್ಣಗೊಳ್ಳಲು ಸುಮಾರು 500 ಕೋಟಿ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂಭ ಮಾತುಗಳು ಕೇಳಿ ಬಂದಿವೆ. ಆದ್ದರಿಂದ ಸಧ್ಯದ ಸರಕಾರದ ಗಮನಕ್ಕೆ ತರಬೇಕಾದ ಜವಾಬ್ದಾರಿ ಎಲ್ಲಾ ರೈತರು ಮಾತ್ರವಲ್ಲದೇ ಜಿಲ್ಲೆಯ ರಾಜಕಾರಣಿಗಳು ವಿಶೇಷ ಕಾಳಜಿ ವಯಿಸಿ ಈ ಯೋಜನೆ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎನ್ನುವುದು ರೈತರ ಬಹುದಿನ ಬೇಡಿಕೆಯಾಗಿದೆ.
ಈ ಕುರಿತು ರೈತರೆಲ್ಲರೂ ಜಾತಿ, ಮತ, ಪಕ್ಷ ಮರೆತು ಎಲ್ಲಾ ಸಂಘಟನೇಯವರು ಒಂದಾಗಿ ಚಿಂತನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೋದಗಿದೆ, ಮುಂದಿನ ನಡೆ, ಹೋರಾಟಗಳ ಕುರಿತು ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಕೋಳ್ಳಬೇಕಿದೆ, ಆದ್ದರಿಂದ ಅಗಸ್ಟ್ 5 ರ ಶನಿವಾರದಂದು ವಿಜಯಪುರ ನಗರದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಚಂತನಾಸಭೆ ಕರೆಯಲಾಗಿದ್ದು, ಈ ವೇಳೆ ಜಿಲ್ಲೆಯ ಪ್ರತಿಯೊಬ್ಬ ರೈತರು, ಎಲ್ಲಾದ್ರಾಕ್ಷಿ ಬೆಳೆಗಾರರು, ಸಮಸ್ತ ಮಠಾಧಿಶರು ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎಲ್ಲಾ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುವರು ಎಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ತಿಳಿಸಿದ್ದಾರೆ.