ಜಿಲ್ಲೆಯಲ್ಲಿ ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಕೆ ವಹಿಸಿ: ದುರುಗೇಶ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳಿಗೆ ಎಡಿಸಿ ಸೂಚನೆ
ರಾಯಚೂರು.ಜು.೨೮- ಜಿಲ್ಲೆಯಲ್ಲಿರುವ ವೈಟಿಪಿಎಸ್ ಸೇರಿದಂತೆ ರಾಸಾಯನಿಕ ಫ್ಯಾಕ್ಟರಿಗಳು ಹೆಚ್ಚುವಿದ್ದು, ಫ್ಯಾಕ್ಟರಿಗಳು ಸ್ಪೋಟ ಸೇರಿದಂತೆ ಯಾವುದೇ ಅನಾಹುತಗಳು ಆಗದಂತೆ ಅಗತ್ಯ ಮುಂಜಾಗ್ರಾತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜು.೨೭ರ ಬುಧವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ರಾಸಾಯನಿಕ ಫ್ಯಾಕ್ಟರಿಗಳು ಸ್ಪೋಟಗೊಳ್ಳದಂತೆ ಮುನ್ನಚರಿಕೆ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿರುವ ರಾಸಾಯನಿಕ ಕಂಪನಿಗಳು, ವೈ.ಟಿ.ಪಿ.ಎಸ್ ಸೇರಿದಂತೆ ಇನ್ನೂ ಆನೇಕವಿದ್ದು, ಅಂತಹ ಕಂಪನಿಗಳಿಂದ ತಾಂತ್ರಿಕ ಕೊರತೆಗಳಿಂದ ಸ್ಪೋಟಗೊಂಡರೆ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯಗಳಿರುತ್ತವೆ. ಇಂತಹ ಘಟನೆಗಳನ್ನು ತಡೆಯಲು ಕಂಪನಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳು ಕಂಪನಿಗಳ ಮಾಲೀಕರಿಗೆ ಸೂಚನೆ ನೀಡಬೇಕೆಂದರು.
ಯಾವುದೇ ಕಂಪನಿಗಳು ಪ್ರಾರಂಭವಾಗಲು ಅದಕ್ಕೆ ಬೇಕಾಗುವ ಮುನ್ನೆಚ್ಚರಿಕೆ ಕ್ರಮಗಳಾದ ಪ್ರಥಮ ಚಿಕಿತ್ಸೆ, ತುರ್ತು ಸೇವೆ, ಅಂಬುಲೆನ್ಸ್ ವ್ಯವಸ್ಥೆ ಹೊಂದಿರಬೇಕು, ಯಾವುದೇ ರಾಸಾಯನಿಕ ಫ್ಯಾಕ್ಟರಿ ಘಟಕ ದಿಂದ ೩ಕಿ.ಮೀ ಅಂತರದ ಒಳಗೆ ಜನರು ವಾಸ ಮಾಡಬಾರದು ಎಂಬ ನಿಯಮ ಪಾಲಿಸಬೇಕು. ಘಟನೆಗಳು ಅಗದಂತೆ ಫ್ಯಾಕ್ಟರಿ (ಕೆಮಿಕಲ್) ತಜ್ಞರ ತಂಡ ಇದ್ದು, ಆಗಾಗ ಪರಿಶೀಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಪೋಟ ಘಟನೆಗಳು ಸಂಭವಿಸಿದ್ದಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿ ಹೆಚ್ಚಿದ್ದು, ಪ್ರಥಮ ಚಿಕಿತ್ಸೆ ಕೊಡಿಸುವುದಾಗಲಿ, ಆಸ್ಪತ್ರೆಗೆ ಸೇರಿಸುವುದಾಗುವುದು, ಜಿಲ್ಲೆಯಲ್ಲಿ ಎಷ್ಟು ಆಸ್ಪತ್ರೆಗಳಿಗೆ ಎಷ್ಟು ಬೆಡ್‌ಗಳಿವೆ ಎಂಬುದರ ಮಾಹಿತಿ ಮೊದಲೇ ಅರಿತು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು. ಅಲ್ಲದೆ ಪೊಲೀಸ್ ಇಲಾಖೆಗಳು ಕೂಡ ಫ್ಯಾಕ್ಟರಿಗಳು ಸ್ಪೋಟಗೊಂಡ ಸಂದರ್ಭದಲ್ಲಿ ಹೇಗೆ ಕರ್ತವ್ಯ ಮಾಡಬೇಕು, ಟ್ರಾಪೀಕ್ ಜಾಮ್ ಆಗದಂತೆ ರಸ್ತೆಯಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಬೇಕು ಸಾರ್ವಜನಿಕರಿಗೆ ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಆಕ್ಷನ್ ಪ್ಲಾನ್ ಮಾಡಿಕೊಂಡು ಕ್ರಮವಹಿಸಬೇಕು ಎಂದು ತಿಳಿಸಿದರು.
ಆರ್.ಟಿ.ಒ ಇಲಾಖೆ ತುರ್ತು ಸಂದರ್ಭದಲ್ಲಿ ವಾಹನಗಳನ್ನು ಒಸಗಿಸುವ ವ್ಯವಸ್ಥೆ ಹೇಗೆ ಕಲ್ಪಿಸಬೇಕೆಂದರು.
ಕೆ.ಪಿ.ಟಿ.ಸಿ.ಎಲ್ ಘಟಕದ ಅಧಿಕಾರಿಗಳು ಸುತ್ತಮುತ್ತಲಿರುವ ಗ್ರಾಮಗಳಿಗೆ ತೆರಳಿ ಕೆಮಿಕಲ್ ಬಗ್ಗೆ ಜಾಗೃತಿ ಮೂಡಿಸಬೇಕು ಕೆಮಿಕಲ್ ಎಲ್ಲಿ, ಯಾವಾಗ ಸೋರಿಕೆ ಆಗುತ್ತದೆ ಎಂಬುದರ ಬಗ್ಗೆ ಪ್ರಜ್ಞೆಯಿಂದ ಇರಬೇಕು. ಕೆಮಿಕಲ್ ಸೋರಿಕೆಯಾಗದಂತೆ ನೋಡಿಕೊಳ್ಳುಬೇಕು. ವಾತಾವರಣದಲ್ಲಿ ಯಾವೆಲ್ಲ ತೊಂದರೆಗಳಿವೆ ಎಂಬುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವೈ.ಟಿ.ಪಿ.ಎಸ್ ವೈಜ್ಞಾನಿಕ ಸಹಾಯಕ ರಾಜು.ಹೆಚ್, ಆರ್.ಟಿ.ಪಿ.ಎಸ್ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ, ಸಾರಿಗೆ ಇಲಾಖೆ ಅಧಿಕಾರಿ ವಿನಯ್ ಕಟೊಕರ್, ರಾಯಚೂರು ತಾಲೂಕು ತಹಸೀಲ್ದಾರ್ ರಾಜಶೇಖರ ಪಾಟೀಲ್, ಜಿಲ್ಲಾ ಸಮಾದ್ದೇಕ್ಷಕರು ಗೃಹ ರಕ್ಷಕ ದಳ ಅಧಿಕಾರಿ ಜಂಬಣ್ಣ ರಾಮಸ್ವಾಮಿ, ಆರ್.ಟಿ.ಪಿ.ಎಸ್, ಕೆ.ಪಿ.ಟಿ.ಸಿ.ಎಲ್ ಕೆಮಿಕಲ್ ಜಿಲ್ಲಾ ಮ್ಯಾನೇಜರ್ ಮಹಾದೇವಪ್ಪ.ಕೆ.ಜಿ, ಡಿವೈಎಸ್ಪಿ ಪರಮಾನಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.