ಜಿಲ್ಲೆಯಲ್ಲಿ ಮಳೆ ಕೊರತೆಬರಗಾಲ ಘೋಷಣೆಗೆ ಮನವಿ: ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.28: ರಾಜ್ಯದ ಇತರೇ ಜಿಲ್ಲೆಗಳಂತೆ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿಯೂ ಮುಂಗಾರು ಮಳೆಯ ಅಭಾವದಿಂದ ಬರಗಾಲ ಉಂಟಾಗಿದೆ. ಅದಕ್ಕಾಗಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಜಿಲ್ಲಾಡಳಿತ ಸರ್ಕಾರಕ್ಕೆ ಮಾಹಿತಿ‌ ನೀಡಿ ಮನವಿ ಮಾಡಲಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ನಿನ್ನೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಶೇ 43 ರಷ್ಟು ಮಳೆಯ ಪ್ರಮಾಣ ಕಡಿಮೆ ಆಗಿದೆ. ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ವಿವರವಾದ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ನೀಡಲಿದೆ. ನಂತರ ಜಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಲಿದೆಂದು ಹೇಳಿದರು.
ಮುಂದಿನ ತಿಂಗಳ ಮೊದಲ ವಾರದಲ್ಲಿ ಜಿಲ್ಲೆಯ ಇನ್ನಿತರ ತಾಲೂಕುಗಳಿ ತೆರಳಿ ಬರಗಾಲದ ಪರಿಸ್ಥಿತಿ ಖುದ್ದಾಗಿ ತಿಳಿಯಲಿದ್ದು. ಇದೇ ವೇಳೆ ಆಯಾ ಕ್ಷೇತ್ರದ ಶಾಸಕರ ಜೊತೆ ಅಭಿವೃದ್ಧಿ, ಕುಂದು ಕೊರತೆಗಳ ಪರಿಶೀಲನಾ ಸಭೆ ನಡೆಸಲಿದೆಂದು ತಿಳಿಸಿದರು.