ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಹೆಚ್ಚಿನ ಕಾರ್ಯಕ್ರಮ ಆಯೋಜನೆ

ಬೀದರ್:ಎ.16: ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಇದರ ಫಲವಾಗಿ 18 ವರ್ಷ ತುಂಬಿದ ಸಾಕಷ್ಟು ಜನ ಮತದಾರರ ಪಟ್ಟಿಯಲ್ಲಿ ತಮ್ಮ ಹೇಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಶನಿವಾರ ನಗರದ ಬಿಗ್ ಬಜಾರ ಹತ್ತಿರ ಮಕ್ಕಳ ಮೇಳದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ ಮಾಹಿತಿ ಶಿಕ್ಷಣ ಮತ್ತು ಸಂವಹ ಇಲಾಖೆ ವತಿಯಿಂದ ಆಯೋಜಿಸಿ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಜಾಗೃತಿಯ ಉದ್ದೇಶ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 72 ಪ್ರತಿಶತ ಮತದಾನವಾದರೆ ಜಿಲ್ಲೆಯಲ್ಲಿ ಶೇ 69 ರಷ್ಟು ಮತದಾನವಾಗಿದೆ. ಆದರಿಂದ ಈ ಬಾರಿ ಮತದಾನ ಪ್ರಕ್ರೀಯೆಯಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಹಾಗೂ ಎಲ್ಲರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಆಕರ್ಷಸಬೇಕು ಎಂಬ ಉದ್ದೇಶದಿಂದ ಸ್ವೀಪ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸ್ವೀಪ್ ಸಮಿತಿಯು ಈಗಾಗಲೇ ಕಡಿಮೆ ಮತದಾನ ಆಗಿರುವ ಮತಗಟ್ಟೆಗೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಅಭಿಯಾನ, ಭೂತ್ ಅವೇರೆನ್ಸ್ ಕ್ಯಾಂಪ್, ಕಾಲೇಜು ಮಟ್ಟದಲ್ಲಿ ಲಿಟೇರೆಸ್ಸಿ ಕ್ಲಬ್, ತರಗತಿಗೆ ಒಬ್ಬರಂತೆ ಅಂಬಾಸೇಟರ್‍ಗಳ ನೇಮಕ ಸೇರಿದಂತ ನಾನಾ ರೀತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದವರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಮತದಾನ ದಿನದಂದು ಅಂಗವಿಕಲರಿಗೆ ಹಾಗೂ 80 ವರ್ಷ ದಾಟಿದವರಿಗೆ ಆಟೋ ವ್ಯವಸ್ಥೆ ಮಾಡಲಾಗಿದೆ.ಮತಗಟ್ಟೆ ಕೇಂದ್ರದಲ್ಲ ಮ್ಯಾಗ್ನಿಫಾಯಿಂಗ್ ಗ್ಲಾಸ್ ಅಳವಡಿಸಲಾಗಿದೆ. ಬಿಸಿಲು ಇರುವದರಿಂದ ಶಾಮಿಯಾನ ಹಾಕಲಾಗುವುದು ಎಂದರು.
ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ .ಎಂ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಿಕೊಳ್ಳಲು ಸಂವಿಧಾನ ನಮ್ಮೇಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದೆ ಇದರ ಸದುಪಯೋಗ ನಮ್ಮಿದಾಗಬೇಕು ಅಂದಾಗ ಮಾತ್ರ ನಮಗೆ ಈ ಅಧಿಕಾರ ದೊರಕಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಾವು ಜಿಲ್ಲೆಯಲ್ಲಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆವೆ ಆದರು ಎಲ್ಲಕಿಂತ ಮುಖ್ಯವಾಗಿ ಸಾರ್ವಜನಿಕರು ತಾವಾಗಿಯೇ ಜಾಗೃತರಾಗಬೇಕು ಅಂದಾಗ ಮಾತ್ರ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದ ಅವರು ಯಾರಿಗೆ ಮತಗಟ್ಟೆಗೆ ಬರಲು ಆಗುವದಿಲ್ಲವೋ ಅವರಿಗಾಗಿ ಪೆÇಸ್ಟಲ್ ಬ್ಯಾಲೆಟ್ ಅವಕಾಶ ಸಹ ಚುನಾವಣಾ ಆಯೋಗ ಕಲ್ಪಿಸಿದೆ ಇದರ ಸದುಪಯೋಗ ಪಡೆಯಬೇಕು ಮತ್ತು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ. ಎಲ್ಲರೂ ಮೇ 10 ರಂದು ಕಡ್ಡಾಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಪಾಲ್ಗೊಳ್ಳೊಣ ಹಾಗೂ ಇತರರನ್ನು ಪಾಲ್ಗೊಳ್ಳುವಂತೆ ಪ್ರೇರೆಪಿಸೊಣ್ಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಕೆಲವು ಮತಗಟ್ಟೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ ಈ ಬಾರಿ ಸ್ವೀಪ್ ಸಮಿತಿ ವತಿಯಿಂದ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಇದರ ಫಲ ನಮಗೆ ದೊರೆಯಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.
ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಮತದಾರರ ಪ್ರಮಾಣ ಹೆಚ್ಚುತ್ತಿದೆ ಹಾಗೂ ಸಾಕಷ್ಟು ಜನ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ ಇದೆ ಉಮ್ಮಸಿನಿಂದ ಮೇ 10 ಮತದಾನ ದಿನದಂದು ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಈ ಬಾರಿ ನೀವು ಮತದಾನ ಮಾಡಲು ಹಿಂಜರಿದರೆ ಮುಂದೆ ಐದು ವರ್ಷದ ವರೆಗೆ ನಿಮ್ಮನ್ನು ಆಳುವವರಿಗೆ ನೀವು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಿರಿ ಆದರಿಂದ ಇಂತಹ ಸುವರ್ಣ ಅವಕಾಶವನ್ನು ಬಳಸಿಕೊಂಡು ಉತ್ತಮ ವ್ಯಕ್ತಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಬೇಕು ಎಂದರು.
ರಾಜ್ಯ ಮಟ್ಟದ ಚುನಾವಣಾ ಮಾಸ್ಟರ ಟ್ರೇನರ್ ಡಾ. ಗೌತಮ ಅರಳಿ ಮಾತನಾಡಿ. ಕೆಲಸದ ನಿಮಿತ್ಯ ಇತರೆ ರಾಜ್ಯಗಳಿಗೆ ತೆರಳಿದವರಿಗೆ ಸಂಬಂದಿಕರು ಸ್ನೇಹಿತರು ಮಾಹಿತಿ ನೀಡಬೇಕು. ಹಾಗೂ ತಮ್ಮ ಮನೆಯಲ್ಲಿರುವ ಕುಟುಂಬ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಲ್ಲದಕಿಂತ ಹೆಚ್ಚಾಗಿ ಹಣ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ನಾನು ಮತದಾನ ಮಾಡುವೆ ಎಂದು ಸಹಿ ಮಾಡುವ ಮೂಲಕ ಎಲ್ಲರೂ ಶಪಥ ಮಾಡಿದ್ದರು. ಮೇಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ನೇರೆಗಾ ಸಹಾಯಕ ನಿರ್ದೇಶಕಿ ಲಕ್ಷಿ?? ಬಿರಾದಾರ, ಬೀದರ ತಾಲೂಕು ಪಂಚಾಯತ ಸಿಬ್ಬಂದಿಗಳಾದ ಸುನಿತಾ ರೆಡ್ಡಿ, ರಮೇಶ ಚಟ್ನಳ್ಳಿ, ಸಂಜೀವ, ಸತ್ಯಜೀತ, ಎನ್.ಸಿ.ಸಿ ಕೆಡೇಟ್‍ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.