ಜಿಲ್ಲೆಯಲ್ಲಿ ‘ಪಂಚ ಅಭಿಯಾನ’ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ: ಜಿಪಂ ಸಿಇಒ


ಬಳ್ಳಾರಿ,ಜೂ.23- ಮಹಾತ್ಮಗಾಂಧಿ ನರೇಗಾ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ‘ಪಂಚ ಅಭಿಯಾನ’ ಕಾರ್ಯ ಯೋಜನೆಗಳನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ, ಗೋಮಾಳ ಪ್ರದೇಶ ಅಭಿವೃದ್ಧಿ, ಕೋಟಿ ವೃಕ್ಷ ಅಭಿಯಾನ, ನಿಷ್ಕ್ರಿಯಗೊಂಡಿರುವ ಕುಡಿಯುವ ನೀರಿನ ಕೊಳವೆ ಬಾವಿಗಳ ಮರುಪೂರ್ಣ ಹಾಗೂ ಹಸಿರು ಸರೋವರ  ಅಭಿಯಾನ ಸೇರಿ ಜಿಲ್ಲೆಯಾದ್ಯಂತ ಐದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಪ್ರದೇಶಾಭಿವೃದ್ಧಿ ಅಭಿಯಾನ:
ಹಿಂಗಾರು ಮಳೆಗಾಲದ ಆರಂಭದ ಈ ದಿನಗಳಲ್ಲಿ ಅತೀ ಹೆಚ್ಚು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ (ಬರಗಾಲ, ಪ್ರವಾಹ ಹಾಗೂ ಭೂ ಕುಸಿತ) ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅನುಷ್ಠಾನಗೊಳಿಲಾಗುತ್ತದೆ ಎಂದು ತಿಳಿಸಿದ್ದಾರೆ.
 ಗೋಮಾಳ ಪ್ರದೇಶಾಭಿವೃದ್ಧಿ ಅಭಿಯಾನ:
ಜಲ ಸಂಜೀವಿನಿ ಕಾರ್ಯಕ್ರಮದಡಿ ಈಗಾಗಲೇ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೋಮಾಳಗಳನ್ನು ಆಯ್ಕೆ ಮಾಡಿ ಎನ್‍ಆರ್‍ಎಂ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ಮಳೆಗಾಲದ ಒಳಗೆ ಅತಿ ಹೆಚ್ಚು ಪ್ರಮಾಣದ ಅರಣ್ಯ ಕಾಮಗಾರಿಗಳನ್ನು ತೆಗೆದುಕೊಂಡು ನರೇಗಾ ಕ್ರಿಯಾ ಯೋಜನೆಯಲ್ಲಿ ಯೋಜಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಗೋಮಾಳಗಳನ್ನು ಆಯ್ಕೆ ಮಾಡಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ ಹೇಳಿದರು.
ಕೋಟಿ ವೃಕ್ಷ ಅಭಿಯಾನ (ಹಸಿರೀಕರಣ):
ಪ್ರತಿ ಗ್ರಾಮ ಪಂಚಾಯತಿ  ಮಟ್ಟದಲ್ಲಿ ವನ ಮಹೋತ್ಸವವನ್ನು ಆಚರಿಸಲು ಕೋಟಿ ವೃಕ್ಷ ಅಭಿಯಾನ  ಎಂಬ ವಿನೂತನ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಈ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯತಿ  ಮಟ್ಟದಲ್ಲಿ ಕನಿಷ್ಠ 1700 (ಜಿಲ್ಲೆಗಳಿಗೆ ನೀಡಿದ ಗುರಿಯಂತೆ) 6-8 ಅಡಿ ಎತ್ತರದ ಸಸಿಗಳನ್ನು   ಪ್ರತಿ ಗ್ರಾಮ ಮಟ್ಟದಲ್ಲಿ ಸಮುದಾಯ ಸ್ಥಳಗಳಲ್ಲಿ ಮತ್ತು ಅಮೃತ ವನವನ್ನು  ನಿರ್ಮಾಣ ಮಾಡಲು ಶಾಲಾ ಕಾಲೇಜುಗಳು, ಸ್ವಸಹಾಯ ಸಂಘಗಳು, ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಮತ್ತು ಗ್ರಾಮದ ಪರಿಸರವಾದಿಗಳನ್ನು ಒಳಗೊಂಡು ಒಗ್ಗೂಡಿಸುವಿಕೆಯಡಿ ಈ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.
 ನಿಷ್ಕ್ರಿಯಗೊಂಡಿರುವ ಕುಡಿಯುವ ನೀರಿನ ಕೊಳವೆ ಬಾವಿಗಳ ಮರುಪೂರಣ:
ಈ ದಿನಗಳಲ್ಲಿ ಅಂತರ್ಜಲ ಮಟ್ಟದ ಕುಸಿತ ಹೆಚ್ಚಾಗಿರುವುದರಿಂದ  ಈ ನಿಟ್ಟಿನಲ್ಲಿ ಜಲಶಕ್ತಿ 2023ರ ಅಭಿಯಾನದಡಿ ಈಗಾಗಲೇ ವಿಫಲ ಬೋರ್‍ವೆಲ್‍ಗಳನ್ನು  ಪುನಶ್ಚೇತನಗೊಳಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮರುಪೂರ್ಣ ಘಟಕ ಕಾಮಗಾರಿಗಳನ್ನು ಯೋಜನೆಯಡಿ ತೆಗೆದುಕೊಳ್ಳಲು ಈ ಅಭಿಯಾನದಡಿ ಯೋಜಿಸಲಾಗಿದೆ.
ಜೈವಿಕ ಅನಿಲ ಅಭಿಯಾನ:
ಪತ್ರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೂಕ್ತ ಫಲಾನುಭವಿಗಳನ್ನು ಆಯ್ಕೆಮಾಡಿ ಕನಿಷ್ಠ ಎರಡು ಜೈವಿಕ ಅನಿಲ ಘಟಕಗಳ ಸ್ಥಾಪನೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಈ ಗುರಿಗೆ ಅನುಗುಣವಾಗಿ ಈಗಾಗಲೇ ಜಾನುವಾರು ಕೊಟ್ಟಿಗೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
 ಹಸಿರು ಸರೋವರ ಅಭಿಯಾನ:
ಈಗಾಗಲೇ ಅಮೃತ ಸರೋವರ ಕಾರ್ಯಕ್ರಮದಡಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಸದರಿ ಅಭಿಯಾನದಡಿ ಕೆರೆಗಳನ್ನು  ಪರಿಸರ ಸ್ನೇಹಿ ಕೆರೆಯಾಗಿ ಪರಿವರ್ತಿಸಿ ಹಸಿರು ಸರೋವರ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ.