ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಕೊರೋನಾ ದೀಪಾವಳಿ ಮಾರುಕಟ್ಟೆಯಲ್ಲಿ ಖರೀದಿ ಜೋರು

ಬಳ್ಳಾರಿ, ನ.14: ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು ಜನತೆ ಮೈ ಮರೆತು‌ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಖರೀದಿ‌ ಜೋರಾಗಿ ನಡೆಸಿದ್ದು ಕಂಡು ಬಂತು.
ಕರೋನಾ ಸಂಕಷ್ಟದ ನಡುವೆ ಈ ಹಿಂದಿನ ಹಬ್ಬಗಳಲ್ಲಿ ಹೆಚ್ಚಿನ ಸಂಭ್ರಮ ಕಂಡು ಬರಲಿಲ್ಲ. ಆದರೆ ಈಗ ಕರೋನಾ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಮತ್ತು ಸುಗ್ಗಿಕಾಲ ಆರಂಭವಾಗಿರುವುದರಿಂದ ಜನತೆ ದೀಪವಾಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ.
ಮಾರುಕಟ್ಟೆಯಲ್ಲಿ ಈಗಾಗಲೇ ‌ಬಟ್ಟೆ, ಚಿನ್ನ, ವಾಹನ, ಗೃಹಪಯೋಗಿ ವಸ್ತುಗಳ ಖರೀದಿ ನಡೆದಿದ್ದು. ಹಬ್ಬದ ಪೂಜೆ ಸಾಮಾಗ್ರಿಗಳಾದ ಹಣ್ಣು, ಹೂ, ಬಾಳೆಗಿಡ, ಮಾವಿನ ಎಲೆ ಖರೀದಿ ಸಹ ಜೋರಾಗಿ‌ನಡೆದಿತ್ತು. ಪ್ರತಿ ಹಬ್ಬದಂತೆ ಈ ವರ್ಷವೂ ಇವಗಳ ಬೆಲೆ ತುಸು ಹೆಚ್ವಿದೆ.
ದೀಪಾವಳಿ ಎಂದಾಕ್ಷಣ ಎಲ್ಲರ ಮನೆ ಮುಂದೆ ಸುಂದರವಾಗಿ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣ-ಬಿರುಸು, ಸಡಗರ-ಸಂಭ್ರಮ ಎಲ್ಲೆಡೆ ಸರ್ವೇ ಸಾಮಾನ್ಯ.
ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ವಿಶೇಷವಾಗಿದ್ದು, ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಭಗವಂತ ಶ್ರೀಕೃಷ್ಣ ಕೂಡ ಎಣ್ಣೆ ಸ್ನಾನದ ಶಾಸ್ತ್ರ ಮಾಡಿದನೆಂದು ಹೇಳಲಾಗುತ್ತದೆ.
ಹಬ್ಬದ ಮೊದಲನೇ ದಿನ ನರಕ ಚತುರ್ದಶಿಯಾಗಿದ್ದು, ನರಕಾಸುರನ ವಧೆಯಾದ ಈ ದಿನದಂದು ಬೆಳಿಗ್ಗೆ ವಿಜಯದ ಸಂಕೇತವಾಗಿ ಆರತಿಯನ್ನು ಮಾಡಿಸಿಕೊಳ್ಳುವ ಸಂಪ್ರದಾಯ.
ಎರಡನೆಯ ದಿನ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ .. ವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. .
ಹಬ್ಬದ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ ಬಲಿಚಕ್ರವರ್ತಿ ಅಂದು ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆ…