ಜಿಲ್ಲೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರ ಸಾವು

ವಿಜಯಪುರ, ಮೇ.2-ಜಿಲ್ಲೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 25 ವರ್ಷ ವಯೋಮಾನದ ಮಹಿಳೆ ರೋಗಿ ಸಂಖ್ಯೆ 1303623 ಅವರು ಮೃತಪಟ್ಟಿದ್ದಾರೆ.ಅವರು ಐಎಲ್‍ಐ, ಕೆಮ್ಮು ,ಜ್ವರ, ತೀವ್ರ ಉಸಿರಾಟ ತೊಂದರೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅದರಂತೆ 20 ವರ್ಷದ ಯುವಕ ರೋಗಿ ಸಂಖ್ಯೆ 1250629 ಮೃತ ಪಟ್ಟಿದ್ದು,ಇವರು ಕೆಮ್ಮು, ತೀವ್ರ ಉಸಿರಾಟ ತೊಂದರೆ ,,ಐ ಎಲ್ ಐ ಯಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.
ಅದರಂತೆ 46 ವರ್ಷದ ಮಹಿಳೆ ರೋಗಿ ಸಂಖ್ಯೆ 1466636 ಖಾಸಗಿ ಆಸ್ಪತ್ರೆಗೆ ಐಎಲ್‍ಐ,ಕೆಮ್ಮು, ರಕ್ತದೊತ್ತಡ, ಶ್ವಾಸಕೋಶ ತೊಂದರೆಯಿಂದ ದಾಖಲಾಗಿದ್ದರು. ಇವರು ಮೃತ ಪಟ್ಟಿದ್ದು, ಇನ್ನೋರ್ವ 35 ವರ್ಷದ ಪುರುಷ ರೋಗಿ ಸಂಖ್ಯೆ 1277962 ಶೀತ, ತೀವ್ರ ಶ್ವಾಸಕೋಶ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ .
ಇವರೆಲ್ಲರ ಅಂತ್ಯ ಸಂಸ್ಕಾರವನ್ನು ಶಿಷ್ಠಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.