ಜಿಲ್ಲೆಯಲ್ಲಿ ಗ್ರಾ.ಪಂ.ಗಳಿಗೆ ಎಸ್.ಟಿ. ಮೀಸಲಾತಿ ಸ್ಥಾನಗಳನ್ನು ಹೆಚ್ಚಿಸಲು ಸಿ.ಎಮ್‍ಗೆ ಮನವಿ

ವಿಜಯಪುರ, ಜ.5-ಅಖಿಲ ಭಾರತೀಯ ವಾಲ್ಮೀಕಿ ಸಮಾಜದ ಸೇವಾ ಸಂಘ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಅನುಸೂಚಿತ ಪಂಗಡಗಳಿಗೆ (ಎಸ್.ಟಿ.) ಮೀಸಲಾತಿ ಸ್ಥಾನಗಳನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜದ ಸೇವಾ ಸಂಘ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ ಪಂಚಾಯತ ರಾಜ ವ್ಯವಸ್ಥೆ ಬಂದಾಗಿನಿಂದಲೂ ಸನ್ 1985 ರಿಂದ 2021 ಇಲ್ಲಿಯವರೆಗೆ ಮೀಸಲಾತಿಯಲ್ಲಿ ಆಯ್ಕೆಗೊಂಡ ನಮ್ಮ ವಾಲ್ಮೀಕಿ ಸಮೂದಾಯಕ್ಕೆ ನಮ್ಮ ಜಿಲ್ಲೆಯಲ್ಲಿ ಬೆರಣಿಕೆಗೆ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವಿರಿ ಎಂದು ಆರೋಪಿಸಿದರು.
ಆದರೆ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ 12 ತಾಲೂಕುಗಳಲ್ಲಿ ನಮ್ಮ ಸಮುದಾಯದ ಜನರಿದ್ದಾರೆ. ಆದರೆ ತಾವು ಮೀಸಲಾತಿ ನಿಗದಿ ಪಡಿಸುವಾಗ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಿರಿ ಇದು ಖಂಡನೆಯ ವಿಷಯ ಈ ಬಾರಿಯಾದರೂ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಎಸ್.ಟಿ. ಮೀಸಲಾತಿ ಸೌಲಭ್ಯ ಕಲ್ಪಿಸಿ ಕೇವಲ ನಾಲ್ಕು ತಾಲೂಕಿನಲ್ಲಿ ಗ್ರಾಮ ಪಂಚಾಯತಿಗಳಿಗೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದೀರಿ ಎಂದು ಹೇಳಿದರು.
ಇನ್ನುಳಿದ 8 ತಾಲೂಕುಗಳಿಗೆ ಇಲ್ಲಿಯವರೆಗೆ ಮೀಸಲಾತಿ ಕಲ್ಪಿಸಿರುವುದಿಲ್ಲಾ ಇದರಿಂದ ವಾಲ್ಮೀಕಿ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿರುತ್ತದೆ. ಎಸ್.ಟಿ. ಮೀಸಲಾತಿ ಸೌಲಭ್ಯವನ್ನು ತಾರತಮ್ಯ ಮಾಡದೆ 12 ತಾಲೂಕುಗಳೀಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿ ಇಲ್ಲದೆ ಹೋದರೆ ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಲಾಗುತ್ತದೆ. ಅಲ್ಲದೆ ನಾವು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಗುತ್ತದೆ ಪಂಚಾಯಿತಿಗಳಿಗೆ ಮೀಸಲು ನಿಗದಿಪಡಿಸಿ ಮೂಗಿಗೆ ತುಪ್ಪವರೆಸುವ ಕೆಲಸ ಬೇಡ ನಮ್ಮ ಹಕ್ಕನ್ನು ನಮಗೆ ಕೊಡಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ದಳವಾಯಿತು. ಶರಣಗೌಡ ಪಾಟೀಲ್, ಶಾಸಪ್ಪ ಲಿಂಗದಳ್ಳಿ, ಸದಾನಂದ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.