ಜಿಲ್ಲೆಯಲ್ಲಿ ಕಾಟನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಸಚಿವರಿಗೆ ಮನವಿ

ರಾಯಚೂರು.ನ.೨೦-ಜಿಲ್ಲೆಯಲ್ಲಿ ಕಾಟನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಯಚೂರು ಫ್ಯಾಕ್ಟರಿ ಓನರ್ಸ್ ಅಸೋಸಿಯೇಷನ್ ಮುಖಂಡರು ಸಚಿವ ಮುರುಗೇಶ್ ಆರ್.ನಿರಾಣಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಏಳು ಸ್ಥಳಗಳಲ್ಲಿ ಕಾಟನ್ ಪಾರ್ಕ್ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು,ರಾಯಚೂರು ಜಿಲ್ಲೆಯಲ್ಲಿ ಕಾಟನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಅವಶ್ಯಕ ಇದೆ. ರಾಯಚೂರು ಜಿಲ್ಲೆಯಲ್ಲಿ ಸಾಕಷ್ಟು ಕಾಟನ್ ಬರುತ್ತಿರುವುದರಿಂದ ವರ್ಷಕ್ಕೆ ೧೨ರಿಂದ ೧೫ ಲಕ್ಷ ಬೆಲ್ ಗಳನ್ನು ಕೇವಲ ರಾಯಚೂರು ಭಾಗದಲ್ಲಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಾಡುತ್ತಿದ್ದೇವೆ. ಆದರೆ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಾಡಿದಂತಹ ಕಾಟನ್ ಬೆಲೆಗಳನ್ನು ಹೊರರಾಜ್ಯಗಳಾದ ತಮಿಳುನಾಡು ಕೊಯಂಬತ್ತೂರು ಮತ್ತು ಮಹಾರಾಷ್ಟ್ರಗಳಿಗೆ ಅನಿಸುವುದರಿಂದ ಆಗುವ ನಷ್ಟ ಏನೆಂದರೆ, ಮೊದಲನೆಯದಾಗಿ ರಾಜ್ಯಕ್ಕೆ ಟ್ಯಾಕ್ಸ್ಸ್ ಮತ್ತು ಇಲ್ಲಿ ಬೆಳೆದಂತಹ ರೈತರಿಗೆ ಸ್ಪರ್ಧಾತ್ಮಕ ಬೆಲೆ ಪಡೆಯಲು ಇಲ್ಲಿರುವ ಯುವಕರಿಗೆ ಮತ್ತು ಯುವತಿಯರಿಗೆ ಉದ್ಯೋಗ ಪಡೆಯಲು ಸಾಕಷ್ಟು ಕಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾಟನ್ ಬೆಳೆಯುತ್ತಿರುವುದರಿಂದ ಈ ಉತ್ಪನ್ನವನ್ನು ಇಲ್ಲಿಗೆ ಕೊನೆಯ ಉತ್ಪನವೆಂದು ಕೊನೆಗೊಳಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಕೆಐಎಡಿಬಿ ವತಿಯಿಂದ ಸುಮಾರು ೭೦೦ ರಿಂದ ೧೦೦೦ ಎಕರೆ ಜಮೀನನ್ನು ಫಾರಂ ನ ೨೮ ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ.ಕೃಷ್ಣ ಮತ್ತು ತುಂಗಭದ್ರಾ ಎರಡು ನದಿಗಳು ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ವಿದ್ಯುತ್ ಶಾಖೋತ್ಪನ್ನ ಇರುವುದರಿಂದ ಇಲ್ಲಿ ಕಾಟನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಬಾಳಷ್ಟು ಅನುಕೂಲವಿದೆ. ಆದ್ದರಿಂದ ಕಾಟನ್ ಟೆಕ್ಸ್ ಟೈಲ್ ಪಾರ್ಕ್ ನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.