ಜಿಲ್ಲೆಯಲ್ಲಿ ಎಕ್ಸ್‌ಲೇಟರ್ ಲಿಫ್ಟ್ ಅಳವಡಿಸಲು ಕೇಂದ್ರ ಸಚಿವರಿಗೆ ಮನವಿ

ರಾಯಚೂರು.ನ.೩೦- ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎಕ್ಸಲೇಟರ್ ಲಿಫ್ಟ್ ಅಳವಡಿಸಲು ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಜೀ ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಕಿಂದ್ರಾಬಾದ್ ರೈಲ್ವೆ ಜನರಲ್ ಮ್ಯಾನೇಜರ್ ಅವರ ಗಮನಕ್ಕೆ ತಂದರೂ, ಇದುವರೆಗೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆಂದರು. ಸಂಸದರ ಮನವಿಗೆ ಸ್ಪಂದಿಸಿ, ಸಿಕಿಂದ್ರಾಬಾದ್ ರೈಲ್ವೆ ಬೋರಡ್ ಜನರಲ್ ಮ್ಯಾನೇಜರ್‌ಗೆ ದೂರವಾಣಿ ಮೂಲಕ ಕರೆ ಮಾಡಿ, ಕೂಡಲೇ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎಕ್ಸಲೇಟರ್ ಲಿಫ್ಟ್ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.