ಜಿಲ್ಲೆಯಲ್ಲಿ ಇದುವರೆಗೆ 35 ಮೈಕ್ರೋಮ್ಯುಕಾಸಸ್ ಪತ್ತೆ – ಮೂವರ ಸಾವು; ರೋಹಿಣಿ ಸಿಂಧೂರಿ

ಮೈಸೂರು. ಮೇ.27: ಯಾರು ಯಾರಿಗೆ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆಯೋ ಅವರು ಆದಷ್ಟು ಬೇಗ ಬಂದು ಚಿಕಿತ್ಸೆ ಪಡೆದುಕೊಳ್ಳಿ ಆಗ ಮಾತ್ರ ನಾವು ಹೆಚ್ಚಿನ ಸಾವಿನ ಪ್ರಮಾಣವನ್ನು ತಡೆಯಬಹುದು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ತಿಳಿಸಿದರು.
ಫೇಸ್ ಬುಕ್ ಲೈವ್ ಬಂದು ಮಾಹಿತಿ ನೀಡಿದ ಅವರು ಮೈಸೂರು ಜಿಲ್ಲೆಯಲ್ಲಿ ಇಂದು 16,611 ಸಕ್ರಿಯ ಪ್ರಕರಣಗಳಿವೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೈ ಇದೆ. ಇದಕ್ಕೆ ಕಾರಣ ನಾವು ಪ್ರತಿದಿನ ನಾಲ್ಕೂವರೆ ಸಾವಿರದಿಂದ 5000ಟೆಸ್ಟಿಂಗ್ ಮಾಡುತ್ತಿದ್ದೇವೆ. ಯಾರು ಯಾರಿಗೆ ಲಕ್ಷಣಗಳಿವೆ ಅವರಿಗೆ ಮಾತ್ರ ಟೆಸ್ಟಿಂಗ್ ಮಾಡುತ್ತಿದ್ದೇವೆ. ಮೊದಲ ಅಲೆಯಲ್ಲಿ ಮಾಸ್ ಟೆಸ್ಟಿಂಗ್ ಮಾಡುತ್ತಿದ್ದೆವು. ಈಗ ಟಾರ್ಗೆಟ್ ಟೆಸ್ಟಿಂಗ್ ಮಾತ್ರ ಮಾಡುತ್ತಿದ್ದೇವೆ. ಪೆÇಸಿಟಿವಿಟಿ ರೇಟ್ ಹೈ ಇದೆ. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇರುವುದು ಸಮಾಧಾಕರ ಸಂಗತಿ ವಿಷಯ. ಪಾಸಿಟಿವ್ ಕೇಸ್ ಜಾಸ್ತಿ ಇದ್ದರೂ ಕೋವಿಡ್ ನಿಂದಾಗಿ ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಇದಕ್ಕೆ ಕಾರಣ ನಾವು ಏಪ್ರೀಲ್ ಮೊದಲ ತಾರೀಖಿನಿಂದಲೂ ಲಸಿಕೆ ಹಾಕುವ ಅಭಿಯಾನವನ್ನು ಮಾಡಿದ್ದೇವೆ. 45ಮೇಲಿನವರಿಗೆ 70-80 ಲಸಿಕೆ ಆಗಿದೆ, ನಗರದಲ್ಲಿಯೂ 65 ವ್ಯಾಕ್ಸಿನೇಶನ್ ಆಗಿದೆ. ಲಕ್ಷಣ ಕಾಣಿಸಿಕೊಂಡ ಬಳಿಕ ತಡವಾಗಿ ಆಸ್ಪತ್ರೆಗೆ ಬರುವುದು ಕೂಡ ಸಾವಿಗೆ ಕಾರಣವಾಗುತ್ತಿದೆ ಎಂದರು.
ಕೋವಿಡ್ ಮಿತ್ರದಲ್ಲಿ 24ಸಾವಿರ ಜನರಿಗೆ ಔಷಧಿ ನೀಡಿದ್ದೇವೆ. ಲಕ್ಷಣಗಳು ಗೋಚರಿಸುತ್ತಲೇ ಟೆಸ್ಟಿಂಗ್ ಗೆ ಒಳಪಟ್ಟು ಮೆಡಿಸಿನ್ ತೆಗೆದುಕೊಂಡರೆ ಸಾವಿನ ಪ್ರಮಾಣ ಇಳಿಕೆಯಾಗಲಿದೆ. ಮೈಕ್ರೋಮ್ಯುಕಾಸಸ್ ಬರಲು ಹಲವು ಕಾರಣಗಳಿವೆ. ಹೈ ಶುಗರ್ ಇರುವವರಿಗೆ ಅದರ ಜೊತೆ ಕೋವಿಡ್ ಆಗಿರುವವರು ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಫಂಗಲ್ ಆಟ್ಯಾಕ್ ಆಗ್ತಿದೆ. ಇವತ್ತಿನ ದಿನಾಂಕಕ್ಕೆ 35 ಮೈಕ್ರೋಮ್ಯುಕಾಸಸ್ ಪತ್ತೆಯಾಗಿದ್ದು, ಇದುವರೆಗೆ 3ಸಾವು ಸಂಭವಿಸಿದೆ. ಪಿಕೆಟಿಬಿನಲ್ಲಿ 100ಆಕ್ಸಿಜನ್ ಬೆಡ್, ಈಎಸ್ ಐ ನಲ್ಲಿ 50ಆಕ್ಸಿಜನ್ ಬೆಡ್, ಟ್ರಾಮಾ ಕೇರ್ ನಲ್ಲಿ 160 ಆಕ್ಸಿಜನ್ ಬೆಡ್, 20ವೆಂಟಿಲೇಟರ್, ಸೂಪರ್ ಸ್ಪೆಶಾಲಿಟಿನಲ್ಲಿ 100 ಐಸಿಯು ಆಕ್ಸಿಜನ್ ಬೆಡ್ ಮಾಡಿದ್ದೇವೆ. ಎಪ್ರೀಲ್ ಕೊನೆಯಲ್ಲಿಯೇ ಆರಂಭಿಸಿದ್ದೇವೆ. ಈವರೆಗೂ ಆಕ್ಸಿಜನ್ ಬೆಡ್‍ಗೆ ತೊಂದರೆ ಇಲ್ಲ. ಆಕ್ಸಿಜನ್ ಬೆಡ್ ಬೇಡಿಕೆ ಕಡಿಮೆ ಆಗಿದೆ. 25-20 ಇದ್ದದ್ದು 10ಕ್ಕೆ ಇಳಿದಿದೆ ಎಂದು ತಿಳಿಸಿದರು.
ಮೈಕ್ರೋಮ್ಯುಕಾಸಸ್ ಮೂಗಿನಿಂದ ಕಣ್ಣಿಗೆ, ನಂತರ ಮೆದುಳಿಗೆ ಹೋಗುವಂತದ್ದು. ಬ್ರೇನ್ ಗೆ ಹೋದಲ್ಲಿ ಕಡಿಮೆ ಮಾಡುವುದು ಕಷ್ಟ, ಯಾವ ಕಾರಣಕ್ಕೆ ಬರುತ್ತದೆ ಎಂದು ಅರ್ಥವಾಗಿಲ್ಲ, ಎಷ್ಟು ಜನರಿಗೆ ಬಿಪಿ ಶುಗರ್ ಇದೆ. ಜಿಲ್ಲೆಯಾದ್ಯಂತ ಯಾರು ಯಾರು ಡಯಾಬಿಟಿಸ್ ಇದ್ದಾರೆ ಕೊಮಾರ್ಬಿಡಿಟಿ ಇದ್ದಾರೆ ಅವರನ್ನು ಗುರುತಿಸುವ ಕೆಲಸವಾಗುತ್ತಿದೆ. ನಾಳೆಯಿಂದ ಜಂತುಹುಳ ನಿವಾರಣಾ ಮಾತ್ರೆ ವಿತರಿಸಲಾಗುತ್ತಿದೆ. ಹೊಟ್ಟೆಯಲ್ಲಿರುವ ಹುಳುವನ್ನು ನಾಶಪಡಿಸಿ ನಾವು ಪಡೆಯುವ ಆಹಾರದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ.
ಅಗತ್ಯಮಾಹಿತಿ ನೀಡುತ್ತಿದ್ದೇವೆ. ಕಡಿಮೆ ಸೋಂಕಿನ ಲಕ್ಷಣವಿದ್ದರೂ ಬಂದು ಟೆಸ್ಟ್ ಮಾಡಿಸಿಕೊಳ್ಳಿ. ಬೇಗನೆ ಟೆಸ್ಟ್ ಮಾಡಿಸಿಕೊಂಡು ಔಷಧ ತೆಗೆದುಕೊಳ್ಳುವುದರಿಂದ ಸಾವಿನ ಸಂಖ್ಯೆಯನ್ನು ತಡೆಯಬಹುದು. ಮನೆ ಮನೆ ಸರ್ವೆಯಲ್ಲಿಯೂ ಔಷಧಿ ನೀಡುವ ಕೆಲಸ ವಾಗುತ್ತಿದೆ ಎಂದರು.
ಸರ್ಕಾರದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಜೂ.7ಕ್ಕೆ ಲಾಕ್ ಡೌನ್ ಮುಗಿಲಿಕ್ಕಿದೆ. ನಮ್ಮಲ್ಲಿ ಎರದೂವರೆ ಸಾವಿರ ಕೇಸ್ ಗಳು ಬರುತ್ತಿದೆ. ಲಾಕ್ ಡೌನ್ ಮಾಡಿದ ಮೇಲೆಯೂ ಮೈಕ್ರೋ ಕಂಟೈನ್ ಮೆಂಟ್ ಸ್ಟ್ರಿಕ್ಟ್ ಆಗಿ ಮಾಡಿದ್ದರಿಂದ ಹುಣಸೂರು,ತಿ.ನರಸೀಪುರದಲ್ಲಿ ಕಡಿಮೆ ಆಗುತ್ತಿದೆ. ನಗರದಲ್ಲಿ ಕೆಲವು ಕಡೆ ಜನರು ಹೊರಗಡೆ ತಿರುಗುತ್ತಿದ್ದಾರೆ. ಕ್ವಾರೈಂಟೈನ್ ನಲ್ಲಿರಬೇಕಾದವರು ತಿರುಗಾಡುತ್ತಿದ್ದಾರೆ. 10 ದಿನದಲ್ಲಿ 2ದಿನವನ್ನು 6ರಿಂದ 12ಗಂಟೆಗೆ ದಿನಸಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಮತ್ತೆ ಐದು ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಲಿದ್ದೇವೆ. ಲಾಸ್ಟ್ 10ದಿನ ಇದೆ. ಏನು ಅವಶ್ಯಕತೆ ಇದೆ ಅದಕ್ಕೆ ಮಾತ್ರ ಬನ್ನಿ, ಮನೆಯಲ್ಲಿಯೇ ಇರಿ, ತರಕಾರಿ, ಹಣ್ಣು ಹಾಲಿನ ಅಂಗಡಿಗಳು ತೆರೆದಿರಲಿವೆ.
ಬೆಳಿಗ್ಗೆ ಸಂಜೆ ವಾಹನದಲ್ಲಿ ಹೊರಗಡೆ ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಒಬ್ಬರಿಗೆ ಒಂದು ಮನೆಯಲ್ಲಿ ಬಂದರೆ ಎಲ್ಲರಿಗೂ ಹರಡುತ್ತಿದೆ. ಓಡಾಡುವುದು ಕಡಿಮೆ ಮಾಡಿದರೆ ಸೋಂಕು ಕಡಿಮೆ ಮಾಡಲು ಸಾಧ್ಯ ಎಂದು ತಿಳಿಸಿದರು.