ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಮಂಜೂರಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಆ.೫-ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಹಿತದೃಷ್ಟಿಯಿಂದ ಇ.ಎಸ್.ಐ.ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರಗತಿಪರ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ನಿರ್ಮಾಣ ಯೂನಿಯನ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ಜಿಲ್ಲೆಯು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಪ್ರದೇಶವಾಗಿದ್ದು, ಮೈಸೂರು ರಾಜ್ಯವೆಂದು ಮುಕ್ತಗೊಂಡು ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡಾಗಿನಿಂದಲೂ ರಾಯಚೂರು ಜಿಲ್ಲೆಯ ಆಸ್ತಿತ್ವದಲ್ಲಿರುತ್ತವೆ. ಈ ಮೊದಲು ರಾಯಚೂರು ಜಿಲ್ಲೆಯ ನೆರೆಯ ಜಿಲ್ಲೆಯಾದ ಗುಲಬರ್ಗಾ ಹಾಗೂ ಈ ಬದಿಯಲ್ಲಿ ಧಾರವಾಡ ಜಿಲ್ಲೆಗೆ ಹೊಂದಿಕೊಂಡಿತ್ತು. ರಾಯಚೂರು ಜಿಲ್ಲೆಯು ಈ ಮೊದಲು ಕ್ಷೇತ್ರ ಅತ್ಯಧಿಕವಾಗಿತ್ತು ನಂತರದ ದಿನಗಳಲ್ಲಿ ರಾಜ್ಯ ಸರಕಾರ ಕ್ಷೇತ್ರದ ಆಧಾರವಾಗಿ ಜನಸಂಖ್ಯೆಗನುಗುಣವಾಗಿ ಜಿಲ್ಲೆಯನ್ನು ಮರುವಿಂಗಡನೆಗೊಳಿಸಿ ನೂತನವಾಗಿ ಕೊಪ್ಪಳ, ಗದಗ ಹಾಗೂ ಈ ಬಲಯಲ್ಲಿ ಯಾದಗಿರಿ ಜಿಲ್ಲೆಯನ್ನು ನೂತನವಾಗಿ ಆಸ್ತಿತ್ವಕ್ಕೆ ಬಂದ
ಜಿಲ್ಲೆಗಳಾಗಿರುತ್ತೇವೆ ಎಂದರು. ಜಿಲ್ಲೆಯಲ್ಲಿ ಸುಮಾರು ೧.ಲಕ್ಷ ಕಟ್ಟಡ ಕಾರ್ಮಿಕರು ನೊಂದಣಿ ಹೊಂದಿರುತ್ತಾರೆ, ಆದರೆ ರಾಯಚೂರು ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಇ.ಎಸ್.ಐ. ಆಸ್ಪತ್ರೆ ಇರುವುದಿಲ್ಲ. ಇದರಿಂದ ಕಟ್ಟಡ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ, ಇ.ಎಸ್.ಐ. ಆಸ್ಪತ್ರೆ ಮಂಜೂರು ಮಾಡಿದ್ದು ರಾಯಚೂರು ಜಿಲ್ಲೆಗೆ ಮಾತ್ರ ಮಲತಾಯಿ ಧೋರಣೆ ಮಾಡಿದಂತಾಗಿದೆ. ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ನಮ್ಮ ರಾಯಚೂರು ಜಿಲ್ಲೆಗೆ ಕಟ್ಟಡ ಕಾರ್ಮಿಕರಿಗೆ ಅನುಕೂಲಕ್ಕಾಗಿ ಹೊಸದಾಗಿ ಐ.ಎಸ್.ಐ, ಆಸ್ಪತ್ರೆ ಮಂಜೂರು ಮಾಡಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಗಪ್ಪ ಅಸ್ಕಿಹಾಳ,ತಿಮ್ಮಪ್ಪ ಸ್ವಾಮಿ, ವಿ.ಈರಣ್ಣ ಆನಂದ ಏಗನೂರು ಸೇರಿದಂತೆ ಉಪಸ್ಥಿತರಿದ್ದರು.