
ಮಂಡ್ಯ.ಫೆ.25:- ಜಿಲ್ಲೆಯಲ್ಲಿ 4,65,000 ಜನರಿಗೆ ಪ್ರಧಾನ ಮಂತ್ರಿ ಆಯುಷ್ಮನ್ ಆರೋಗ್ಯ ಕಾರ್ಡ್‍ಗಾಗಿ ನೊಂದಣಿ ಮಾಡಲಾಗಿದ್ದು, ರಾಜ್ಯದಲ್ಲಿ 14 ರಿಂದ 15 ಸ್ಥಾನದಲ್ಲಿದ್ದೇವೆ. ಉಚಿತ ಆರೋಗ್ಯ ಸೇವೆ ಒದಗಿಸುವ ಆಯುಷ್ಮನ್ ಆರೋಗ್ಯ ಕಾರ್ಡ್‍ಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಆಯುಷ್ಮನ್ ಆರೋಗ್ಯ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಆರೋಗ್ಯ ಸಮಸ್ಯೆ ಯಾವ ಸಮಯದಲ್ಲಿ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಯುಷ್ಮನ್ ಆರೋಗ್ಯ ಕಾರ್ಡ್ ಪಡೆದ ಬಿ.ಪಿ.ಎಲ್ ಕಾರ್ಡ್ ಕುಟುಂಬದಾರರು ಒಂದು ವರ್ಷಕ್ಕೆ 5 ಲಕ್ಷ ರೂ ಹಾಗೂ ಎ.ಪಿ.ಎಲ್ ಕಾರ್ಡ್ ಕುಟುಂಬದವರು 1.5 ಲಕ್ಷ ರೂ ಎಂಪ್ಯಾನಲ್ಡ್ ಆಸ್ಪತ್ರೆಯಲ್ಲಿ ಸೇವೆ ಪಡೆಯಬಹುದು ಎಂದರು.
ಗ್ರಾಮ ಒನ್ ಫ್ರಾಂಚೈಸಿಗಳು ಫೆಬ್ರವರಿ 28 ರೊಳಗಾಗಿ ಜಿಲ್ಲೆಯಲ್ಲಿ ಹೆಚ್ಚು ನೊಂದಣಿ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಶಾಲಾ, ಕಾಲೇಜು, ವಸತಿ ಶಾಲೆಗಳು, ಹಾಸ್ಟಲ್ ಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆಯುಷ್ಮನ್ ಆರೋಗ್ಯ ಕಾರ್ಡ್ ನೊಂದಣಿ ಕೆಲಸ ನಿರ್ವಹಿಸಬೇಕು. ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಅವರು ಇದಕ್ಕಾಗಿ ಒಂದು ವೇಳಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳು ಹಾಗೂ ಪೆÇ?ಷಕರಿಗೆ ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೆÇಷಕರು ಆಧಾರ್ ಕಾರ್ಡ್ ಹಾಗೂ ಮಬೈಲ್ ಸಂಖ್ಯೆಗೆ ಬರುವ ಒಟಿಪಿ ಮಾಹಿತಿ ನೀಡಿದರೇ ಸ್ಥಳದಲ್ಲೇ ಆಯುಷ್ಮನ್ ಆರೋಗ್ಯ ಕಾರ್ಡ್‍ಗೆ ನೊಂದಣಿ ಮಾಡಿಕೊಡಲಾಗುವುದು ಎಂದರು.
ಮಾರ್ಚ್ 11 ರಂದು ಮಾನ್ಯ ಪ್ರಧಾನ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯುಷ್ಮನ್ ಆರೋಗ್ಯ ಕಾರ್ಡ್ ನೊಂದಣಿ ಹಾಗೂ ಗ್ರಾಮ ಒನ್ ಕಾರ್ಯನಿರ್ವಹಣೆ ಎರಡು ಯೋಜನೆಗಳು ಉತ್ತಮ ಸ್ಥಾನದಲ್ಲಿರಬೇಕು ಎಂದರು.
ಪಡಿತರ ವಿತರಣಾ ಕೇಂದ್ರ ಮಾಲೀಕರೊಂದಿಗೆ ಚರ್ಚಿಸಿ ಗ್ರಾಮ ಒನ್ ಅವರು ವೇಳಪಟ್ಟಿ ಸಿದ್ಧಪಡಿಸಿಕೊಂಡು ಪಡಿತರ ಆಹಾರ ಧಾನ್ಯ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಯುಷ್ಮನ್ ಆರೋಗ್ಯ ಕಾರ್ಡ್ ನೊಂದಣಿ ಕೆಲಸ ನಿರ್ವಹಿಸಬಹುದು ಎಂದರು.
ಗ್ರಾಮ ಒನ್ ಅವರು ಆಯುಷ್ಮನ್ ಆರೋಗ್ಯ ಕಾರ್ಡ್ ನೊಂದಣಿ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚು ಜನರನ್ನು ನೊಂದಾಯಿಸಿ.ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ರಾಜ್ಯ ಮಟ್ಟದಲ್ಲಿ ಬಹುಮಾನ ಸಹ ನೀಡಲಾಗುತ್ತಿದೆ. ಪ್ರತಿ ಮಾಹೆ ಮಂಡ್ಯ ಜಿಲ್ಲೆಗೆ ಬಹುಮಾನ ದೊರೆಯುವಂತಾಗಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ: ಧನಂಜಯ್ ಅವರು ಮಾತನಾಡಿ ಜಿಲ್ಲೆಯಲ್ಲಿ ಅಂದಾಜು ಶೇ 15 ರಷ್ಟು ಜನ ಮಧುಮೇಹ ಅಥವಾ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆ ಹಾಗೂ ಇನಿತರ ಕಾಯಿಲೆಗಳ ಚಿಕಿತ್ಸೆ ದುಬಾರಿಯಾಗಬಹುದು. ಸಾರ್ವಜನಿಕರು ಸಮಯವನ್ನು ಆಯುಷ್ಮನ್ ಆರೋಗ್ಯ ಕಾರ್ಡ್ ನೊಂದಣಿಗೆ ಮೀಸಲಿಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.