ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಪ್ರಾರಂಭಿಸಲು ಸಂಸದ ಒತ್ತಾಯ

ರಾಯಚೂರು, ಮೇ.೨೬- ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨ ನೇ ಅಲೆಯ ಕೊವೀಡ್ ೧೯ ಮಹಾಮಾರಿ ಹೆಚ್ಚಾಗುತ್ತಿರುವ ಕಾರಣ ಕೂಡಲೇ ಆಕ್ಸಿಜನ್ ಸೌಲಭ್ಯ ಒದಗಿಸಬೇಕೆಂದು ಸಂಸದ ರಾಜಾ ಅಮರೇಶ್ವರ ನಾಯಕ್ ಅವರು
ಬೃಹತ್ ಮತ್ತು ಮಧ್ಯಮ ಕೈಗಾರಿಕೆ , ಸಾರ್ವಜನಿಕ ಉದ್ದಿಮೆ ಸಚಿವ
ಜಗದೀಶ್ ಶೆಟ್ಟರ ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಕ್ಷೇತ್ರದಲ್ಲಿಯೇ ಅತ್ಯಂತ ಹಿಂದುಳಿದ ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ,ಬಡ ಹಾಗೂ ವಲಸೆ ಕೂಲಿ ಕಾರ್ಮಿಕರು ವಾಸವಾಗಿದ್ದು, ಕೇವಿಡ್ ಮಹಾಮಾರಿಯ ೨ ನೇ ಅಲೆಯು ತೀವ್ರವಾಗಿರುವ ಕಾರಣ ಸಾವು ಬದುಕಿನ ಮಧ್ಯೆ ದಿನ ನಿತ್ಯ ಹೋರಾಡುತ್ತಿರುವರು , ಪ್ರಸ್ತುತ ಗ್ರಾಮ ವ್ಯಾಪ್ತಿಯಲ್ಲಿ ಮಹಾಮಾರಿ ಹಬ್ಬಿದ್ದು , ಜಿಲ್ಲಾಡಳಿತವತಿಯಿಂದ ಲಾಕ್‌ಡೌನ್ ಇನ್ನಿತರೆ,ಎಲಾ ಮುಂಜಾಗ್ರತೆಗಳನ್ನು ತೆಗೆದುಕೊಂಡು ಕೊರೋನಾ ಮಹಾಮಾರಿಯನ್ನು ತಡೆಗಟ್ಟಲು ಹಗಲು ಇರುಳೆನ್ನದೆ ಶ್ರಮಿಸುತ್ತಿರುವರು.ಆದರೆ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳಿಗೆ ಬೇಕಾಗುವ ಆಕ್ಸಿಜನ್, ವೆಂಟಿಲೇಟರ್ ಗಾಳನ್ನು ಒದಗಿಸಲು ಸಾಧ್ಯವಾಗದೆ ಕೊರತೆ ಅನುಭವಿಸುತ್ತಿರುವರ ಕೊಪಿಡ್ -೧೯ ಭಾಧಿತರಿಗೆ ಅತೀ ಅವಶ್ಯವಿರುವ ಆಕ್ಸಿಜನ್ ಬೇಡಿಕೆಯು ಹೆಚ್ಚಾಗಿದೆ,ಪ್ರಸ್ತುತ ರಾಯಚೂರು ಜಿಲ್ಲೆಗೆ ಪ್ರತಿನಿತ್ಯ ೧೫.೦ ಕೆ , ಎಲ್ , ಎಲ್ ಎಮ್‌ಓ ( ೧೭.೧೨೪ ಎಂ.ಟಿ ) ಅವಶ್ಯಕತೆ ಇದು ಆದರೆ ಕೇವಲ ೧೨.೦ ಕೆ ಎಲ್ .( ೧೩.೬೯೯೨ ಎಂ.ಟಿ ) ಎಲ್.ಎಮ್‌ಓ , ಸರ್ಕಾರದಿಂದ ಸರಬರಾಜು ಆಗುತ್ತಿದೆ , ಅದೇ ರೀತಿ ಯಾದಗಿರಿ ಜಿಲ್ಲೆಗೆ ಪ್ರತಿನಿತ್ಯ ೧೦.೦೪ ಕೆಎಲ್ ( ೬.೮೪ ಎಂ.ಟಿ ) ಎಲ್.ಎಮ್ ,ಅವಶ್ಯಕತೆ ಇದು ಆದರೆ ಕೇವಲ ೬.೦ ಕೆ , ಎಲ್ , ಎಲ್.ಎಮ್.ಓ. ( ೩.೪೨೪೮ ಎಂಟಿ ) ಸರಬರಾಜು ಆಗುತ್ತಿದೆ , ಕೇಂದ್ರ ಸರ್ಕಾರದಿಂದ ಮಹಾತ್ಮಾಕಾಂಕ್ಷಿ ಜಿಲೆಗಳೆಂದು ಘೋಷಣೆಯಾದ ರಾಯಚೂರು ಮತ್ತು ಯಾದಗಿರಿ ಜಿಲೆಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿಯೇ ಆಕ್ಸಿಜನ್ ಘಟಕಗಳನ್ನು ಅಳವಡಿಸುವುದು ಅತೀ ಅವಶ್ಯವಿದೆ, ಆದ್ದರಿಂದ ಕೊರೋನಾ ಮಹಾಮಾರಿಯ ತಡೆಗಟ್ಟಲು ಜಿಲ್ಲೆಯಲ್ಲಿಯೇ ಆಕ್ಸಿಜನ್ ಉತ್ಪಾದನೆ ಘಟಕಗಳನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.