
ಮಂಡ್ಯ.ಮೇ.23:- ಮಂಡ್ಯ ಜಿಲ್ಲೆಯನ್ನು ದಡಾರ-ರುಬೆಲ್ಲಾ ಕಾಯಿಲೆಯಿಂದ ಮುಕ್ತಗೊಳಿಸಲು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ದಡಾರ- ರುಬೆಲ್ಲಾ ನಿರ್ಮೂಲನೆ 2023ರ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಡಾರ-ರುಬೆಲ್ಲಾ ಕಾಯಿಲೆಯನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯಿಂದ ನಿರ್ಮೂಲನೆ ಮಾಡಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದರೆ ದೇಶವನ್ನು ದಡಾರ-ರುಬೆಲ್ಲಾ ಕಾಯಿಲೆಯಿಂದ ಮುಕ್ತ ಮಾಡಬಹುದು ಎಂದರು.
ಮಂಡ್ಯ ಜಿಲ್ಲೆಯಲ್ಲಿ ದಡಾರ-ರುಬೆಲ್ಲಾ ಕಾಯಿಲೆಯನ್ನು 14 ಪ್ರಕರಣಗಳಲ್ಲಿ ಪತ್ತೆಹಚ್ಚಲಾಗಿದೆ. ಈ ಕಾಯಿಲೆಯು ಹೆಚ್ಚಾಗಿ 5 ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳ ಮುಖ, ಹೊಟ್ಟೆಯ ಮೇಲೆ ಹಾಗೂ ತೆಳುವಾದ ಜಾಗದಲ್ಲಿ ಗುಳ್ಳೆಗಳು ಜೊತೆಗೆ ಜ್ವರದ ಲಕ್ಷಣ ಕಂಡುಬರುತ್ತದೆ.
ಈ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದರು.
ಜಿಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಕಾಯಿಲೆ ಲಕ್ಷಣ ಕಂಡು ಬಂದರೆ ತಕ್ಷಣಕ್ಕೆ ಸ್ಥಳೀಯ ವೈದ್ಯರ ಸಲಹೆ ಪಡೆಯುವುದು, ಜೊತೆಗೆ ಚಿಕಿತ್ಸೆ ಪಡೆದುಕೊಳ್ಳುವುದು. ಸರ್ಕಾರದಿಂದಲೇ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಮಂಡ್ಯ ಜಿಲ್ಲೆಯ ರಕ್ತ ನಿಧಿಯಲ್ಲಿ ಶೇ56 ರಕ್ತ ಮಾತ್ರ ಚಿಕಿತ್ಸೆಯ ಸಂದರ್ಭದಲ್ಲಿ ಸಿಗುತ್ತಿದೆ. ಇನ್ನೂ ಉಳಿದ ಶೇಕಡವಾರು ರಕ್ತವನ್ನು ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರಕ್ತದ ನಿಧಿಯಲ್ಲಿ ರಕ್ತದ ಕೊರೆತೆಯನ್ನು ತಪ್ಪಿಸಲು ಜಿಲ್ಲೆಯ ಏಳು ತಾಲ್ಲೂಕಿನಲ್ಲಿ ಜೂನ್ 7 ರಿಂದ 14 ರವರೆಗೆ ರಕ್ತದಾನಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಮೂರು ರಕ್ತನಿಧಿ ಕೇಂದ್ರಗಳಲ್ಲಿ ಸುರಕ್ಷಿತವಾಗಿ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ಅವಶ್ಯಕತೆ ಇರುವ ರೋಗಿಗೆ ರಕ್ತವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಮಾಡಬೇಕು ಎಂದರೆ ನಮ್ಮ ಜಿಲ್ಲೆಯ ರಕ್ತದಾನಿಗಳು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜೂನ್ 14 ರಂದು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಆರೋಗ್ಯ ಇಲಾಖೆ ವತಿಯಿಂದ ಸನ್ಮಾನಿಸಿ ಪೆÇ?ರತ್ಸಾಹಿಸಲಾಗುದು ಎಂದರು.
ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಸುರಕ್ಷಿತ ರಕ್ತ ದಾನಿಗಳ ಮೂಲಕ ರಕ್ತವನ್ನು ಸಂಗ್ರಹಿಸಿಕೊಳ್ಳಲು ರಕ್ತದಾನ ಶಿಬಿರಗಳನ್ನು ಆಯೋಜಿಸಲು ವಿವಿಧ ಸಂಧರ್ಭದಲ್ಲಿ ರಕ್ತದ ಕೊರತೆಯಾದಾಗ ಅದನ್ನ ನೀಗಿಸಲು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಟಾಸ್ಕ್ ಫೆÇ?ರ್ಸ್ ಸಮಿತಿಯನ್ನು ರಚನೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು, ನಿವೃತ್ತ ಆರೋಗ್ಯಾಧಿಕಾರಿ ಟಿ.ಎನ್ ಮರೀಗೌಡ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್ ಆಶಾಲತಾ, ಮಾನಸಿಕ ರೋಗ ತಜ್ಞ ಡಾ.ಕೆ.ಪಿ ಅಶ್ವಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್ ಶಶಿಧರ್, ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಮೇಲ್ವಿಚಾರಕ ವಿನಯ್ ಹಾಜರಿದ್ದರು.