ಜಿಲ್ಲೆಗೆ ಹೆಚ್ಚಿನ ರಸಗೊಬ್ಬರ ಪೂರೈಸಲು ಮನವಿ

ರಾಯಚೂರು, ಜುಲೈ,೧೬, ಬೆಂಗಳೂರಿನ ದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ನ್ಯಾನೋ ಯೂರಿಯಾ ತಯಾರಿಕ ಘಟಕ ಶಂಕುಸ್ಥಾಪನೆಗೆ ಆಗಮಿಸಿದ ಬಹುದೊಡ್ಡ ರಸಗೊಬ್ಬರ ತಯಾರಿಕೆ ಇಫ್ಕೋ ಸಂಸ್ಥೆಯ ಅಧ್ಯಕ್ಷ ದಿಲಿಪ್ ಸಂಗಾನಿ ಹಾಗೂ ಇಫ್ಕೋ ಸಂಸ್ಥೆಯ ವ್ಯವಸ್ಥಾಪಕ ಯು.ಎನ್.ಅವಸ್ಥಿ ಅವರನ್ನು ಜಿಲ್ಲೆಯ ಟಿಎಪಿಸಿಎಂಸ್ ನ ಅಧ್ಯಕ್ಷರು ಹಾಗೂ ನಾಫೆಡ್ ಸಂಸ್ಥೆ ನವದೆಹಲಿಯ ನಿರ್ದೇಶಕ ಪತಂಗೆ ಜಯವಂತರಾವ್ ಮತ್ತು ಇಫ್ಕೋ ನಿರ್ದೇಶಕ ಎಂ.ಎನ್.ರಾಜೇಂದ್ರ ಕುಮಾರ್ ಅವರು ಭೇಟಿ ನೀಡಿ ಸನ್ಮಾಸಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರ ಪೂರೈಸುವಂತೆ ಮನವಿ ಸಲ್ಲಿಸಿದರು.