ಜಿಲ್ಲೆಗೆ ಬೋಯಿಂಗ್ ಆಸ್ಪತ್ರೆ ಮಂಜೂರು ಮಾಡಲು ನಾಡಗೌಡ ಒತ್ತಾಯ

ರಾಯಚೂರು, ಮೇ.೩೦- ಬೋಯಿಂಗ್ ಆಸ್ಪತ್ರೆ ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರ ವೆಂಕಟರಾವ್ ನಾಡಗೌಡ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ಜಿಲ್ಲೆಯನ್ನು ದೋಆಬ್ ( ಎರಡು ನದಿಗಳು ) ಎಂದು ಕರೆಯುತ್ತಾರೆ . ಜಿಲ್ಲೆಯ ಎರಡು ಭಾಗದಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ . ಜಿಲ್ಲೆಯ ಅಭಿವೃದ್ಧಿ ನಿರೀಕ್ಷೆ ಮಟ್ಟಕ್ಕೆ ಆಗಿಲ್ಲ . ದೇಶದ ನೀತಿ ಆಯೋಗವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಪರಿಗಣಿಸಿದೆ . ಆ ಹಿನ್ನೆಲೆಯಲ್ಲಿ ರಾಯಚೂರಿಗೆ ಬೋಯಿಂಗ್ ಆಸ್ಪತ್ರೆ ಮಾಡುವುದು ಸೂಕ್ತ , ಈ ಹಿಂದೆಯೇ ರಾಯಚೂರು ಜಿಲ್ಲೆಗೆ ಮಂಜೂರಾದ ಅನೇಕ ಯೋಜನೆಗಳು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಐಐಟಿ ಯನ್ನು ಧಾರವಾಡ ಕ್ಕೆ ಸ್ಥಳಾಂತರಿಸಲಾಗಿದೆ , ಈಗ ಬೋಯಿಂಗ್ ಆಸ್ಪತ್ರೆಯುನ್ನು ಕಲಬುರ್ಗಿಗೆ ನೀಡಲಾಗುತ್ತಿದೆ , ಕಲಬುರ್ಗಿಯಲ್ಲಿ ಇಎಸ್‌ಐ ( ಇಎಸ್‌ಐ ) ಆಸ್ಪತ್ರೆ ಹಾಗೂ ಜೈದೇವ ಹೃದ್ರೋಗ ಆಸ್ಪತ್ರೆಗಳನ್ನು ಅಲ್ಲಿ ನೀಡಲಾಗಿದೆ .ಆದ್ದರಿಂದ ನೀತಿ ಆಯೋಗದ ಹಿಂದುಳಿದ ಮಹತ್ವಾಕಾಂಕ್ಷಿ ಜಿಲ್ಲೆಯಾದ ರಾಯಚೂರಿಗೆ ಬೋಯಿಂಗ್ ಆಸ್ಪತ್ರೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.