ಜಿಲ್ಲೆಗೆ ಕೀರ್ತಿ ತಂದ ಮಂದಾರ

ಬ್ಯಾಡಗಿ, ಏ 17: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಏ.12 ರಿಂದ 16 ರವರೆಗೆ ಜರುಗಿದ ಪುರುಷರ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ (ಸೀನಿಯರ್ ನಾಷನಲ್ಸ್) ವಿಜೇತ ಇಂಡಿಯನ್ ರೈಲ್ವೇಸ್ ತಂಡಕ್ಕೆ ಬ್ಯಾಡಗಿ ಪಟ್ಟಣದ ಯುವ ಕ್ರೀಡಾಪ್ರತಿಭೆ ಮಂದಾರ ಶೆಟ್ಟಿ ಮೂರನೇ ತರಬೇತುದಾರನಾಗಿ ತಂಡವನ್ನು ಮುನ್ನಡೆಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪುರುಷರ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಅಂತಿಮ ಘಟ್ಟದಲ್ಲಿ ಸರ್ವೀಸಸ್ ತಂಡದ ವಿರುದ್ಧ ಜಯಗಳಿಸಿತು, ಮಂದಾರ ಶೆಟ್ಟಿ ಈ ಮೊದಲು ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಧಾರವಾಡದ ಕ್ರೀಡಾ ವಸತಿ ನಿಲಯದಲ್ಲಿ (ಸಾಯ್) ಆಟಗಾರನಾಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು.
ಜಿಲ್ಲೆಯ ಕಬಡ್ಡಿ ಪ್ರತಿಭೆಯೊಂದು ಸಣ್ಣವಯಸ್ಸಿನಲ್ಲಿಯೇ ತರಬೇತುದಾರನಾಗಿ ಸಾಧನೆ ತೋರುತ್ತಿರುವುದು ಜಿಲ್ಲೆಯ ಕ್ರೀಡಾಪಟುಗಳಿಗೆ ಸಂತಸ ತಂದಿದೆ, ಅವರ ಈ ಸಾಧನೆಗೆ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಂಜಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ಖಜಾಂಚಿ ಗಂಗಣ್ಣ ಎಲಿ, ಸಹಕಾರ್ಯದರ್ಶಿ ರಾಜೇಶ ಮಾಳಗಿ ಸೇರಿದಂತೆ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.