ಜಿಲ್ಲೆಗೆ ಇನ್ನೂ ೬.೪೯೩ ಟಿಎಂಸಿ ನೀರು ಕಾಲುವೆಗೆ ಹರಿಸದಿದ್ದರೆ ಉಗ್ರ ಹೋರಾಟ ಎಚ್ಚರಿಕೆ

ರಾಯಚೂರು,ಏ.೪- ಐಸಿಸಿ ಪ್ರಕಾರ ಹರಿಬಿಟ್ಟಿರುವ ನೀರಿನ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡರೆ ರಾಯಚೂರು ಜಿಲ್ಲೆಗೆ ಇನ್ನೂ ೬.೪೯೩ ಟಿಎಂಸಿ ನೀರು ಬಾಕಿ ಇದೆ.ಅದನ್ನು ಕಾಲುವೆಗೆ ಹರಿಸಿ ಇಲ್ಲದಿದ್ದರೆ
ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ರೈತರು ಬಿತ್ತಿ ಬೆಳೆಯಲು ಸಾಧ್ಯವಾಗದಿರುವ ಬೆಳೆನಷ್ಟಕ್ಕೆ ಎಕರೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು.ಮಾ.೨೦ ರವರೆಗೆ ನೀರು ಹರಿಸಲು ಸಾಧ್ಯವಾಗುತ್ತದೆ ಎಂದು ನೀರಾವರಿ ಹಿರಿಯ ಅಧಿಕಾರಿಗಳು ನಮಗೆ ತಿಳಿಸಿದ್ದರು. ಈಗ ಏಪ್ರೀಲ್ ಮೊದಲವಾರ ಮುಗಿಯುತ್ತ ಬರುತ್ತಿದ್ದರೂ ಕಾಲುವೆಗೆ ನೀರು ಹರಿಯುತ್ತಿದೆ. ಇದರರ್ಥ ಏನು? ಕೊಪ್ಪಳ ಜಿಲ್ಲೆಯಲ್ಲಿ ಕಾಲುವೆಯ ನೀರನ್ನು ಅಕ್ರಮವಾಗಿ ಪಡೆಯುತ್ತಿರುವವರ ೧.೭೦ ಲಕ್ಷ ಎಕರೆಯಲ್ಲಿ ಈಗ ಬೆಳೆ ಬೆಳೆದು ನಿಂತಿದೆ. ಈಗ ನೀರು ಕೊಡದೆ ಹೋದರೆ ಬೆಳೆ ಸಂಪೂರ್ಣ ನಷ್ಟಕ್ಕೊಳಗಾಗುತ್ತಿರುವುದರಿಂದಲೇ ಈಗ ಕಾಲುವೆಗೆ ನೀರು ಹರಿ ಬಿಡಲಾಗುತ್ತಿದೆ. ಬೇಸಿಗೆಯಲ್ಲಿ ೧.೫ ಟಿ.ಎಂ.ಸಿ ನೀರು ಬೇಕು ಈಗ ಬಂದ್ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು ಕಾಲುವೆಗೆ ನೀರು ಬಿಡಲಾಗುತ್ತಿದೆ ಎಂದ ಅವರು,ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶ ವಡ್ರಟ್ಟಿ ವಲಯ: ೧,೧೯,೮೪೫ ಎಕರೆ ಸಿಂಧನೂರು ವಲಯ: ೧,೮೮,೬೮೮ ಎಕರೆ ಸಿರವಾರ ವಲಯ: ೧,೭೩,೮೬೧ ಎಕರೆ ಬಳಕೆಯಾದ ನೀರು
ವಡ್ರಟ್ಟಿ ವಲಯ: ೧೫.೦೩೩೪ ಟಿಎಂಸಿ ರಾಯಚೂರು : ೧೭.೭೮೦ ಟಿಎಂಸಿ ಬಳಸಿಕೊಳ್ಳಬೇಕಾಗಿದ್ದ ನೀರು ವಡ್ರಟ್ಟಿ ವಲಯ: ೮.೯೪೦ ಟಿ.ಎಂ.ಸಿ ರಾಯಚೂರು ಜಿಲ್ಲೆ : ೨೪.೧೭೩ ಟಿ.ಎಂ.ಸಿ
ವ್ಯತ್ಯಾಸ : ೬.೪೯೩ ಟಿ.ಎಂ.ಸಿ ನೀರು ರಾಯಚೂರು ಜಿಲ್ಲೆಯ ಕಾಲುವೆಗಳಿಗೆ ನೀರು ಹರಿಸಬೇಕು. ನಮ್ಮ ಪಾಲಿನ ನೀರನ್ನು ನಮಗೆ ಕೊಡಬೇಕು. ಇಲ್ಲದೆ ಹೋದರೆ ಪರಿಹಾರವನ್ನಾದರೂ ಕೊಡಬೇಕು. ಇಲ್ಲದೆ ಹೋದರೆ ಮೇ ಕೊನೆಯ ವಾರ ಇಲ್ಲವೇ ಜೂನ್ ನಲ್ಲಿ ದೊಡ್ಡಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತದೆ ಎಚ್ಚರಿಸಿದರು.
ಅವಿಭಜಿತ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳು. ೪.೧ ಇಂಚಿನಷ್ಟು ಮಳೆ ಬೀಳುವ ಬಿಸಿಲುನಾಡು. ೧೮೮೭ ರಲ್ಲಿ ಸಂಭವಿಸಿದ ಭೀಕರ ಬರಗಾಲಕ್ಕೆ ಈ ಪ್ರದೇಶ ೩,೩೦,೦೦೦ ಸಾವಿರ ಜನ ಹಸಿವಿನಿಂದ ಅಸುನೀಗಿದ ಭಯಂಕರ ಇತಿಹಾಸ ಹೊಂದಿರುವ ಈ ಪ್ರದೇಶದಲ್ಲಿ ಕೃತ್ರಿಮ ನೀರಾವರಿ ಕನಸು ಚಿಗುರೊಡೆದ ಪರಿಣಾಮ ನೈಜಾಮನ ಷರತ್ತುಗಳಿಗೊಳಪಟ್ಟು ಮೈಸೂರು ಹಾಗೂ ಮದ್ರಾಸ್ ಪ್ರಾಂತ್ಯಗಳು ಸಹಿ ಹಾಕಿದ ಪರಿಣಾಮ ಅಣೆಕಟ್ಟು ೧೯೪೪ ರಲ್ಲಿ ಪ್ರಾರಂಭವಾಗಿ ೧೯೫೨ ರಲ್ಲಿ ಕಾಲುವೆಗೆ ನೀರು ಹರಿಸಲಾಯಿತು. ಇತ್ತೀಚಿನ ಬೆಳವಣಿಗೆಯ ಹಿನ್ನಲೆಯಲ್ಲಿ ನೀರಾವರಿ ಪ್ರದೇಶಗಳಿಗೆ ಸಮರ್ಪಕ ನೀರು ಕೊಡುವಲ್ಲಿ ಸರಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ರೈತರನ್ನ ರೈತ ಮುಖಂಡರನ್ನು ಕತ್ತಲಲ್ಲಿ ಇಟ್ಟು ನೀರನ್ನು ಬೇಕಾಬಿಟ್ಟಿಯಾಗಿ ಹರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಬಸವಂತ್ರಾಯಗೌಡ, ಕೆ.ಜಿ.ವೀರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.