ಜಿಲ್ಲೆಗಾಗಿ ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ಧ: ಆನಂದ್ ಸಿಂಗ್

ಬಳ್ಳಾರಿ ನ 18 : ಯಡಿಯೂರಪ್ಪ ರಾಜೀನಾಮೆ ಕೇಳಿದ್ರೇ ಆನಂದದಿಂದ ಕೊಡುವೆ. ನನಗೆ ಜಿಲ್ಲೆಯಾಗೋದು ಮುಖ್ಯವಿತ್ತು. ವಿಜಯನಗರ ಜಿಲ್ಲೆಯ ಮುಂದೆ ಸಚಿವ ಸ್ಥಾನ ತೃಣಕ್ಕೆ ಸಮಾನ ಎಂದರು ಅರಣ್ಯ ಸಚಿವ ಆನಂದ್ ಸಿಂಗ್.

ಸಚಿವ ಸಂಪುಟ ಸಭೆಯಲ್ಲಿ‌ ವಿಜಯನಗರ ಜಿಲ್ಲೆ ರಚನೆ ಬಗ್ಗೆ ತಾತ್ವಿಕ ಘೋಷಣೆ ಮಾಡಿದ ನಂತರ ಇಂದು‌ಜಿಲ್ಲೆಯ ಹೊಸಪೇಟೆಗೆ ಬಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಗ್ ಅವರು ಯಡಿಯೂರಪ್ಪ ಅವರು‌ ನೂತನ ಜಿಲ್ಲೆ ಘೋಷಣೆ ಮಾಡಿದ ವಿಜಯನಗರದ ವೀರಪುತ್ರರಾಗಿದ್ದಾರೆಂದರು.

ಮನೆಯಲ್ಲಿ ಅಣ್ಣತಮ್ಮಂದಿರು ಬೇರೆಯಾದರೆ ನೋವು ಇರುತ್ತದೆ. ಹಾಗೆ ಜಿಲ್ಲೆ ವಿಭಜನೆ ಆದರೆ ಒಂದಿಷ್ಟು ಭಿನ್ನಾಭಿಪ್ರಾಯ ಸಹಜ‌ ಎಂದರು.

ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರ ಜೊತೆಗೆ ಮಾತನಾಡುವೆ.‌ ಈಗಾಗಲೇ ಯಡಿಯೂರಪ್ಪ ಕೂಡ ಸೋಮಶೇಖರ ರೆಡ್ಡಿ ಜೊತೆ ಮಾತನಾಡಿದ್ದಾರೆ.
ಜಿಲ್ಲೆಯ ವಿಚಾರದಲ್ಲಿ ಪ್ರತಿಷ್ಠಿ ಬೇಡ ನಾವೆಲ್ಲರೂ ಅಣ್ಣ ತಮ್ಮಂದಿರು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಮನವೊಲಿಸೋ ಯತ್ನವನ್ನು ಆನಂದ ಸಿಂಗ್‌ ಮಾಡಿದ್ದಾರೆ.