ಜಿಲ್ಲಾ ಹಡಪದ ಸಮಾಜಕ್ಕೆ 5 ಲಕ್ಷ ಅನುದಾನ ನೀಡಿದ ಶಾಸಕ ಯತ್ನಾಳ

ವಿಜಯಪುರ, ಎ.21-ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘಕ್ಕೆ ನಗರ ಶಾಸಕ ಬಸನಗೌಡ ಪಾಟೀಲಯತ್ನಾಳ ಅವರು 5 ಲಕ್ಷ ಅನುಧಾನ ನೀಡಿದ್ದರ ಹಿನ್ನೆಲೆ ಸಮಾನ ಬಾಂಧವರು ಅಭಿನಂದಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಶ್ರೀ ಹಡಪದ ಅಪ್ಪಣ್ಣನವರು ಕಾಯಕದಿಂದ ಕೈಲಾಸ ಕಂಡವರು, ಅಂಥವರ ಸಮುದಾಯ ಭವನ ನಿರ್ಮಾಣಕ್ಕಾಗಿ ಹಾಗೂ ಸಮಾಜದ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲು ಶರಣ ಆಧ್ಯಾತ್ಮವನ್ನು ಇಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ನೀಡಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮಾಜದ ಏಳ್ಗೆಗಾಗಿ ಕೆಲಸ ಮಾಡಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಈ ಸಮುಧಾಯಕ್ಕೆ 5 ಲಕ್ಷ ರೂ. ಅನುಧಾನ ನೀಡಿದ್ದು ಮರೆಯಲಾಗದ ಸಂಗತಿಯಾಗಿದೆ. ಆದ್ದರಿಮದ ಮುಂಬರುವ ದಿನಗಳಲ್ಲಿ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಸರ್ಕಾರದಿಂದ ಹಡಪದ ಅಪ್ಪಣ್ಣನವರ ಸಮುದಾಯ ಭವನದಲ್ಲಿ ಆಚರಿಸಲು ಜಿಲ್ಲಾಧ್ಯಕ್ಷರಾದ ಬಸವರಾಜ ಶಿವಶರಣರ ಹಾಘು ಕಾರ್ಯದರ್ಶಿ ವಿರುಪಾಕ್ಷ ಕತ್ನಳ್ಳಿ ಹಾಗೂ ಜಿ.ಎಸ್.ಹೊಸಟ್ಟಿ, ವಿಠ್ಠಲ ನಾವಿ, ದಶರಥ ನಾವಿ, ನರಸು ಜುಮನಾಳ, ಅಶೋಕ ನಾವಿ, ಬಸವರಾಜ ಬಿಸನಾಳ, ಹಣಮಂತ ಕತ್ನಳ್ಳಿ, ರಮೇಶ ಇಳಕಲ್ ಸೇರಿದಂತೆ ಮತ್ತಿತರರು ಬಸನಗೌಡರ ಕಾರ್ಯವನ್ನು ಸ್ವಾಗತಿಸಿ ಅಭಿನಂದಿಸಿದ್ದಾರೆ.