ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನ

ರಾಯಚೂರು,ಏ.೧೩- ನಗರ ಸಭೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಏ.೧೨ರ(ಬುಧವಾರ) ನಗರಸಭೆ ಕಚೇರಿ ಎದುರು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಶಪ್ಪ ಪೂಜಾರಿ ಹಸಿರು ನಿಶಾನೆಯನ್ನು ತೋರಿಸಿವ ಮೂಲಕ ಚಾಲನೆ ನೀಡಿ ನಂತರ ಹಸ್ತಾಕ್ಷರ ಮಾಡುವುದರ ಮೂಲಕ ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಎಂದು ಹೇಳಿದರು.
ಈ ಮತದಾರರ ಜಾಗೃತಿ ಅಭಿಯಾನ ನಗರಸಭೆ ಕಾರ್ಯಾಲಯದಿಂದ ಪ್ರಾರಂಭವಾಗಿ ಏಕ್ ಮಿನಾರ್, ಬಟ್ಟೆ ಬಜಾರ, ತರಕಾರಿ ಮಾರುಕಟ್ಟೆ, ಮಹಾವೀರ ವೃತ್ತದ ಮೂಲಕ ಮಹತ್ಮಾಗಾಂಧಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲಿ ತಹಸಿಲ್ದಾರರ ಚನ್ನಮಲ್ಲಪ್ಪ ಗಂಟಿ, ಜಿಲ್ಲಾ ಪಂಚಾಯತ್ ಸಹಕಾರ್ಯದರ್ಶಿ ಅಣ್ಣಾರಾವ್, ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶರಣಪ್ಪ, ಪರಿಸರ ಅಭಿಯಂತರ ಮಲ್ಲಿಕಾರ್ಜುನ್, ಶರಣಬಸವ, ದಂಡಪ್ಪ ಬಿರಾದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.