
ಬೀದರ,ಸ 5: ಬೀದರ ಜಿಲ್ಲಾ ಸಹಕಾರ ಯೂನಿಯನ್ 61ನೇ ವಾರ್ಷಿಕ ಮಹಾಸಭೆ ಯೂನಿಯನ್ ಅಧ್ಯಕ್ಷ ಪರಮೇಶ್ವರಮುಗಟೆ ಅಧ್ಯಕ್ಷತೆಯಲ್ಲಿ
ಯೂನಿಯನ್ ಸಭಾಭವನದಲ್ಲಿ ಜರುಗಿತು.
ಯೂನಿಯನ್ ಅಧ್ಯಕ್ಷಪರಮೇಶ್ವರ ಮುಗಟೆ ಜಿಲ್ಲಾಸಹಕಾರ ಯೂನಿಯನ್ ನಿರ್ವಹಿಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ, ವಲಯವಾರು
ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನುನೀಡುತ್ತಾ ಬರುತ್ತಿದೆ. ಜಿಲ್ಲೆಯಲ್ಲಿ
ಮಾತೃಸಂಸ್ಥೆಯಾಗಿ ಜಿಲ್ಲಾ ಸಹಕಾರ ಯೂನಿಯನ್ ಶಿಕ್ಷಣ,ತರಬೇತಿ ಮತ್ತು ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟುಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾ ಸಹಕಾರಯೂನಿಯನ್ ಮಾಹಿತಿ ಕೇಂದ್ರವಾಗಿ ಕೆಲಸ ಮಾಡಲು
ಪ್ರಯತ್ನಿಸಬೇಕಾಗಿದೆ.ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಸಹಕಾರ ಸಂಘಗಳು ಪ್ರಗತಿಯತ್ತ ಒಯ್ಯಲುಸಾಧ್ಯವಾಗುತ್ತದೆ ಎಂದರು.
ಬೀದರ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ಬೀದರ ಜಿಲ್ಲಾ
ಸಹಕಾರ ಯೂನಿಯನ್ನಿನ ನಿರ್ದೇಶಕ ಉಮಾಕಾಂತ
ನಾಗಮಾರಪಳ್ಳಿ ಅವರು ಮಾತನಾಡಿ ದಿ. ಗುರುಪಾದಪ್ಪ
ನಾಗಮಾರಪಳ್ಳಿ ಇವರನ್ನು ಸ್ಮರಿಸುತ್ತಾ ಸಹಕಾರದ ಬಗ್ಗೆ ಹೆಚ್ಚಿನ
ರೀತಿಯಲ್ಲಿ ಅಭಿವೃದ್ಧಿ ಹೊಂದುವಲ್ಲಿ ಬಹಳಷ್ಟುಕಾರ್ಯಕೆಲಸಗಳನ್ನು ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿಬೀದರ ಜಿಲ್ಲೆಯ ಹೆಸರು ಪ್ರಸಿದ್ಧ ಪಡೆದಿದೆ ಎಂದು ತಿಳಿಸಿದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮ.ಸಲಿಮೋದ್ದೀನ್ ಮಾತನಾಡಿದರು.
ಜಿಲ್ಲಾ ಸಹಕಾರ ಯೂನಿಯನ್ನಿನಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್. ಆರ್.ಮಲ್ಲಮ್ಮ ಸ್ವಾಗತಿಸಿ ಮತ್ತು ವಂದನಾರ್ಪಣೆ ಮಾಡಿದರು.ಮಹಾಸಭೆಯಲ್ಲಿ ಯೂನಿಯನ್ನಿನ ಸಿಬ್ಬಂದಿಗಳು ಹಾಗೂಜಿಲ್ಲೆಯ ಎಲ್ಲಾ ತರಹದ ಸಹಕಾರ ಸಂಘದ ಸದಸ್ಯರೆಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿದರು.