
ಶಹಾಪೂರ:ಫೆ.24: ಶಹಾಪೂರ ಪಟ್ಟಣದ ಭೀಮರಾಯನ ಗುಡಿ ಪ್ರವಾಸ ಮಂದಿರದಲ್ಲಿ ನೂತನವಾಗಿ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾರ ಹಾಗೂ ಉಪಾಧ್ಯಕ್ಷರಾದ ನಾರಾಯಣ ಇವುರಗಳ ವತಿಯಿಂದ ಶಹಾಪೂರ ಮತ ಕ್ಷೇತ್ರದ ಶಾಸಕರಾದ ದರ್ಶನಾಪೂರ ಅವರಿಗೆ ಒಕ್ಕೂಟದ ವತಿಯಿಂದ ಮತ್ತು ಸರ್ವ ನಿರ್ದೇಶಕರ ಮಂಡಳಿಯ ಮೂಲಕ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಜಿಲ್ಲಾ ಸಹಕಾರ ಸಂಘ ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡಿ ತಮಗೆ ಎಲ್ಲಾ ರೀತಿಯಲ್ಲೂ ಸಹಾಯ ಸಹಕಾರ ನೀಡುತ್ತೇನೆ ಎಂದು ಶಾಸಕರು ಹೇಳಿದರು
.ಈ ಸಂದರ್ಭದಲ್ಲಿ ಕೆಂಚಪ್ಪ ನಗನೂರು ಸಿದ್ದಪ್ಪ ಹೊಟ್ಟೆ ಶಿವಮಾಂತಪ್ಪ ಚಂದಾಪೂರ, ನೀಲಕಂಠ ಬಡಿಗೇರಾಮಲ್ಲಿಕಾರ್ಜುನ ಉಳ್ಳಂಡಗೇರಾ ಹಲವಾರು ಸಹಕಾರ ಸಂಘದ ಹಿರಿಯರುದುರಣಿಯರು ಇತರರು ಇದ್ದರು