ಜಿಲ್ಲಾ ಶಸಾಪ ಪದಾಧಿಕಾರಿಗಳಿಂದ ಡಾ ಎಂ.ಜಿ.ಈಶ್ವರಪ್ಪಗೆ ಸನ್ಮಾನ

ದಾವಣಗೆರೆ.ಜ.೫- ಬಾಪೂಜಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಂಸ್ಥೆಯ ನಿರ್ದೇಶಕರೂ, ಜಿಲ್ಲಾ ಶಸಾಪ ದ ಗೌರವಾಧ್ಯಕ್ಷರೂ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ, ಎಂ,ಜಿ.ಈಶ್ವರಪ್ಪ ಅವರನ್ನು  ಜಿಲ್ಲಾ ಶಸಾಪದ ಪದಾಧಿಕಾರಿಗಳಾದ ಪಂಕಜಾ ದಯಾನಂದ್, ಶೈಲಜಾ ಪಾಲಾಕ್ಷ, ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಕಾರ್ಯದರ್ಶಿ ಎಂ,ಕೆ ಕಬ್ಬೂರು, ಖಜಾಂಚಿ ವಿಶ್ವನಾಥ್ ಬೊಂಗಾಳೆ  ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಸಂಸ್ಥೆಯ ನೌಕರರು ಇದ್ದರು.