ಜಿಲ್ಲಾ ವಿಭಜನೆ ವಿರೋಧಿಸಿ ಪಕ್ಷಾತೀತ ತೀವ್ರ ಹೋರಾಟಕ್ಕೆ ನಿರ್ಧಾರ

ಬಳ್ಳಾರಿ ನ 22: ಈ ವರಗೆ ಜಿಲ್ಲೆ ವಿಭಜನೆ ವಿರೋಧಿಸಿ ನಡೆಸುತ್ತಿದ್ದ ಹೋರಾಟ ಕೆಲವರಿಂದ, ಕೆಲ ಸಂಗಟನೆಗಳಿಂದ ಮಾತ್ರ ನಡೆಯುತ್ತಿತ್ತು. ಆದರೆ ಇಂದು ನಗರದ ಗಾಂಧಿಭವದಲ್ಲಿ ಸೇರಿದ ವಿವಿಧ ಪಕ್ಷಗಳ ಮತ್ತು ಸಂಗ್ಟನೆಗಳ ಮುಖಂಡರು ಹೋರಾಟವನ್ನು ತೀವ್ರ ಮತ್ತು ನಿರಂತರವಾಗಿ‌ ನಡೆಸಲು ನಿರ್ಧರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್. ಬಜೆಟ್ ನಲ್ಲಿ ಅನುಮತಿ ಪಡೆಯದೆ. ಯಾವುದೇ ಆಯೋಗ, ಪ್ರಾಧಿಕಾರ, ನಿಗಮ ಮಾಡುವುದು. ಹೊಸ ಜಿಲ್ಲೆ ಘೋಷಣೆ ಮಾಡುವುದು ಸಂವಿಧಾನಿಕವಾಗಿ ತಪ್ಪು.
ಅಲ್ಲದೆ ಜನರ ಅಭಿಪ್ರಾಯ ಪಡೆಯದೇ, ಈ ರೀತಿ ನೀತಿ ನಿರ್ಧಾರ ಪ್ರಜಾ ಪ್ರಭುತ್ವ ವಿರೋಧಿಯಾದುದ್ದು, ಇದು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ.
ಜಿಲ್ಲೆ ರಚನೆಗೆ ಭಗೋಲಿಕವಾಗಿ‌ ಜಿಲ್ಲಾ ಕೇಂದ್ರ ರಚನೆ ಮಾಡುವುದು ಮುಖ್ಯ ಅಲ್ಲ.
ಹರಪನಹಳ್ಳಿಯವರು ನಮಗೆ ಪ್ರತ್ಯೇಕ ಜಿಲ್ಲೆ ಬೇಕೆಂದು, ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಆಗಬೇಕೆಂದು ಹೋರಾಟ ಆರಂಭವಾಗಿದೆ. ಈ ರೀತಿ ಪರಿಸ್ಥಿತಿಯಲ್ಲಿ ಹೊಸ ಜಿಲ್ಲೆ ರಚನೆ ಬೇಕಾ,
ಇದು ಕೇವಲ ರಾಜಕೀಯ ಹಿತಾಸಕ್ತಿಗೆ ಕಾರಣವಾಗಿದೆ.
ಜಿಲ್ಲಾ ಹಿತಾಸಕ್ತಿಯಿಂದ ಎಲ್ಲಾ ಪಕ್ಷದ ಮುಖಂಡರು, ಜನ ಪ್ರತಿನಿಧಿಗಳು ಹೋರಾಟಕ್ಕೆ ಬರಬೇಕು ಎಂದರು.

ನಗರ ಶಾಸಕರು ಆಡಳಿತದಲ್ಲಿ ಇರುವುದರಿಂದ ಹೋರಾಟಕ್ಕೆ ಬರಲ್ಲ ಎನ್ನುವುದು ಸರಿಯಲ್ಲ. ಹೈದ್ರಾಬಾದ್ ಕರ್ನಾಕ ಅಭಿವೃದ್ಧಿ ಮಂಡಳಿಗೆ ಬಳ್ಳಾರಿ ಜಿಲ್ಲೆ ಸೇರಿಸಬೇಕು ಎಂಬ ಹೋರಾಟ ನಡೆದಾಗ
ಈ ಹಿಂದೆ ನಗರದ ಶಾಸಕರಾಗಿದ್ದ ಮುಂಡ್ಲೂರು ರಾಮಪ್ಪ ಅವರು ತಮ್ಮ ಸರ್ಕಾರ ಇದ್ದರೂ ಪಾಲ್ಗೊಂಡಿದ್ದರು. ಅದರಂತೆ ಶಾಸಕ ಸೋಮಶೇಖರ ರೆಡ್ಡಿ ಅವರು ಈ ಹೋರಾಟಕ್ಕೆ ಬರಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ. ಅಂಕಲಯ್ಯ ಅವರು‌ ಮಾತನಾಡಿ ನೂತನ‌ಜಿಲ್ಲೆ ರಚನೆ
ಇದು ಜನರ ಬೇಡಿಕೆ ಅಲ್ಲ ಜನಪ್ರತಿನಿಧಿಗಳ ಬೇಡಿಕೆಯಾಗಿದೆ.
ಇದರ ವಿರುದ್ದ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ಇದೆ.
ಈಗಾಗಲೇ ನೂತನ
ತಾಲೂಕುಗಳನ್ನು‌ ಮಾಡಿ ಎರೆಡು ವರ್ಷ ಆದರೂ ಅಲ್ಲಿ ಅನೇಕ ಕಚೇರಿಗಳು ಅಗಿಲ್ಲ ಮೊದಲು ಅವುಗಳ ಅಭಿವೃದ್ಧಿ ಆಗಲಿ, ನಂತರ ಜಿಲ್ಲಾ ವಿಭಜನೆ ಮಾಡಲಿ ಎಂದರು.

ಜನ ಕಲ್ಯಾಣ ವೇದಿಕೆಯ ಕೆ. ಎರ್ರಿಸ್ವಾಮಿ ಮಾತನಾಡಿ
ಜಿಲ್ಲಾಧಿಕಾರಿ ಕಚೇರಿ ಮುಂದೆ ಟೆಂಟ್ ಹಾಕಿ ನಿರಂತರ ಹೋರಾಟ ನಡೆಸೋಣ ಎಂದರು.

ಜಿಲ್ಲೆ ವಿಭಜನೆಯಿಂದ ಚರಿತ್ರೆ ಗೌಣ ಆಗಲಿದೆ. ಕುಡಿಯುವ ನೀರಿಗೂ ಹೊಸ ಜಿಲ್ಲೆಯ ಅಧಿಕಾರಿಗಳಿಗೆ ಭಿಕ್ಷೆ ಬೇಡುವ ಸಂದರ್ಭ ಬರಬಹುದು. ಜನರ ಭಾವನೆ ಅರ್ಥಮಾಡಿಕೊಳ್ಳಬೇಕು.
ಇತರೇ ದೊಡ್ಡ ಜಿಲ್ಲೆಗಳ ವಿಂಗಡಣೆ ಆಗಲಿ.
ಜನರ ಅಭಿಪ್ರಾಯ ಮುಖ್ಯ.
ಜಿಲ್ಲೆ ವಿಭಜನೆ ಮಾಡಿದರೆ
371 ಜೆ. ಸೌಲಭ್ಯ ವಿಜಯನಗರ ಜಿಲ್ಲೆಯ ಜನತೆಗೆ ತಪ್ಪುವ ಸಾಧ್ಯತೆ‌ ಇದೆ ಸೇರಿದಂತೆ ಅನೇಕ ಅಭಿಪ್ರಾಯಗಳನ್ನು‌ ಮುಖಂಡರು ತಿಳಿಸಿದರು.
ಅಂತಿಮವಾಗಿ ನಾಳೆ ನಡೆಯುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳುವುದು. ನಾಡಿದ್ದು ಸಂಜೆ ಸಭೆ ಸೇರಿ‌ ಹೋರಾಟಕ್ಕೆ ಸಮಿತಿ, ಹೋರಾಟದ ರೂಪುರೇಷ ರಚನೆ ಮಾಡುವುದು, ಹಳ್ಳಿಗಳಿಗೆ ತೆರಳಿ ಜನರಿಗೆ ತಿಳುವಳಿಕೆ ಮೂಡಿಸಿ‌ ಹೋರಾಟ ತೀವ್ರತೆ ಬಗ್ಗೆ ನಿರ್ಧರಿಸಿತು.
ಸಭೆಯಲ್ಲಿ, ಟಿ.ಜಿ.ವಿಠ್ಠಲ್, ಜೆ.ಸತ್ಯ ಬಾಬು, ಮುಂಡರಗಿ ನಾಗರಾಜ್, ಸಂಗನಕಲ್ ಹಿಮಂತರಾಜ್, ಕೋಳೂರು ವೆಂಕಟೇಶಗೌಡ, ಎ.ಮಾನಯ್ಯ, ಮೀನಳ್ಳಿ ತಾಯಣ್ಣ, ರಿಜ್ವಾನ್ ಖಾನ್, ಬಂಡೆಗೌಡ, ಸದ್ಮಲ್ ಮಂಜುನಾಥ್, ಬಿ.ಡಿ.ಗೌಡ, ಮಾಧ್ಯಮ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.